ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸ್‌ಗಡ: ಗರ್ಭಿಣಿಯನ್ನು 6 ಕಿ.ಮೀ ಹೊತ್ತೊಯ್ದು ಮಾನವೀಯತೆ ಮೆರೆದ ಯೋಧರು

ಸಿಆರ್‌ಪಿಎಫ್‌ ಯೋಧರ ಮಾನವೀಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ
Last Updated 21 ಜನವರಿ 2020, 13:53 IST
ಅಕ್ಷರ ಗಾತ್ರ

ರಾಯ್‌ಪುರ:ಶೀತಗಾಳಿಯಲ್ಲಿ ನಡುಗುತ್ತಿರುವ ಜಮ್ಮು–ಕಾಶ್ಮೀರದಲ್ಲಿ ಗರ್ಭಿಣಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಲು ಯೋಧರು ಮಾನವೀಯ ಹಸ್ತ ಚಾಚಿದ್ದು ಇತ್ತೀಚೆಗೆ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಛತ್ತೀಸ್‌ಗಡದ ಬಿಜಾಪುರದಲ್ಲಿ ಸಿಆರ್‌ಪಿಎಫ್‌ (ಕೇಂದ್ರ ಮೀಸಲು ಪೊಲೀಸ್ ಪಡೆ) ಯೋಧರೂ ಅದೇ ರೀತಿ ಮಾನವೀಯತೆ ಮೆರೆದಿದ್ದಾರೆ.

ಬಿಜಾಪುರದ ಗ್ರಾಮೀಣ ಪ್ರದೇಶವಾದಪದೇಡಾದಲ್ಲಿ ವಾಸವಿರುವಗರ್ಭಿಣಿಯೊಬ್ಬರಿಗೆ ತುರ್ತು ಚಿಕಿತ್ಸೆಯ ಅಗತ್ಯ ಎದುರಾಗಿದೆ.ರಸ್ತೆ ಸಂಪರ್ಕವಿಲ್ಲದ ಪ್ರದೇಶವಾದದ್ದರಿಂದ ಕೂಡಲೇ ಸ್ಥಳಕ್ಕಾಗಮಿಸಿದ ಸಿಆರ್‌ಪಿಎಫ್‌ ಯೋಧರು ನೆರವಿಗೆ ಮುಂದಾಗಿದ್ದಾರೆ. ಅರಣ್ಯ ಪ್ರದೇಶದ ಮೂಲಕ ಗರ್ಭಿಣಿಯನ್ನು ಮಂಚಸಮೇತ ಹೊತ್ತುಕೊಂಡು ಸುಮಾರು 6 ಕಿ.ಮೀ ದೂರದವರೆಗೆ ರಸ್ತೆ ಸಂಪರ್ಕ ಇರುವಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ ವಾಹನ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಸಿಆರ್‌ಪಿಎಫ್‌ ಯೋಧರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಮ್ಮು–ಕಾಶ್ಮೀರದಲ್ಲಿ ಯೋಧರು ಗರ್ಭಿಣಿಗೆ ನೆರವಾದ ವಿಡಿಯೊವೊಂದನ್ನು ಭಾರತೀಯ ಸೇನೆಯ ಚಿನಾರ್‌ ಕಾರ್ಪ್ಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡಿತ್ತು. ಯೋಧರ ಈ ಮಾನವೀಯ ಕಾರ್ಯಕ್ಕೆ ಸೇನಾ ದಿನದಂದುಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT