ಬುಧವಾರ, ಜನವರಿ 22, 2020
24 °C

ಗುವಾಹಟಿ| ಪೌರತ್ವ ಮಸೂದೆ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು: 2 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

A security personnel fires tear gas during a curfew in Guwahati on December 12, 2019,

ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಗುಂಡು ತಾಗಿ ಇಬ್ಬರು ಪ್ರತಿಭಟನಕಾರರು ಸಾವಿಗೀಡಾಗಿದ್ದಾರೆ. 

ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಜನರು ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ಅಸ್ಸಾಂ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ಜ್ಯೋತಿ ಮಹಾಂತ ವಿನಂತಿಸಿದ್ದಾರೆ.

ಇದನ್ನೂ ಓದಿ: ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂ ಉದ್ವಿಗ್ನ: ವಿಮಾನ ಸೇವೆ ರದ್ದು

ಪ್ರತಿಭಟನೆ ಬಗ್ಗೆ ಪ್ರಚೋದನಾತ್ಮಕ ದೃಶ್ಯಗಳನ್ನು ಅಥವಾ ವರದಿಗಳನ್ನು ಬಿತ್ತರಿಸಬೇಡಿ ಎಂದು ಮಹಾಂತಾ ಮಾಧ್ಯಮಗಳಿಗೆ ಒತ್ತಾಯಿಸಿದ್ದಾರೆ.

 ಕೆಲವು ದುಷ್ಟ ಶಕ್ತಿಗಳು ಮತ್ತು ರಾಜಕೀಯ ನಂಟು ಹೊಂದಿರುವವರು ರಾಜ್ಯದಲ್ಲಿ ಗಲಭೆಯ್ನುಂಟು ಮಾಡಲು  ಯತ್ನಿಸುತ್ತಿದ್ದಾರೆ. ಪ್ರತಿಭಟನೆಗಳು ಪ್ರಜಾಸತ್ತಾತ್ಮಕವಾಗಿದ್ದರೆ  ನಾವೇನೂ ಮಾಡಲಾರೆವು.  ಜನರು ಕಾನೂನು ಕೈಗೆತ್ತಿಕೊಂಡು ಕ್ಷೋಭೆಯನ್ನುಂಟು ಮಾಡಬೇಡಿ ಎಂದು ನಾನು ವಿನಂತಿಸುತ್ತಿದ್ದೇನೆ ಎಂದು ಮಹಾಂತ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪ್ರತಿಭಟನಕಾರರು ಮಾಡುತ್ತಿರುವ ದಾಳಿ ಒಳ್ಳೆಯದಲ್ಲ. ಜನರು ಕಾನೂನು ಕೈಗೆತ್ತಿಕೊಂಡರೆ ಅದು ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂದು ಮಹಾಂತ ಹೇಳಿದ್ದಾರೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು