ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕನಿಷ್ಠ ಆದಾಯ ಯೋಜನೆ ಹಣದುಬ್ಬರಕ್ಕೆ ಕಾರಣವಾಗುತ್ತದೆ: ಮೋದಿ

Last Updated 6 ಏಪ್ರಿಲ್ 2019, 11:10 IST
ಅಕ್ಷರ ಗಾತ್ರ

ಸೋನೆಪುರ್: ಶನಿವಾರ ಒಡಿಶಾದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ನಾನು ಒಡಿಶಾದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ.ನೀವು ನನ್ನ ಮೇಲಿಟ್ಟ ಭರವಸೆಯನ್ನು ಈಡೇರಿಸುತ್ತೇನೆ ಎಂದಿದ್ದಾರೆ.

ಒಡಿಶಾದಲ್ಲಿ ನಾನು ರೈಲ್ವೆ ಹಳಿ ಅಭಿವೃದ್ಧಿ ಪಡಿಸಿದಾಗ ಮತ್ತು ಇಲ್ಲಿನ 24 ಲಕ್ಷ ಜನರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದಾಗಲೇ ಬಿಜೆಪಿ ಮೇಲೆ ಇಲ್ಲಿನ ಜನರಿಗೆ ವಿಶ್ವಾಸ ಜಾಸ್ತಿಯಾಯಿತು.ಬಿಜೆಡಿ ಮತ್ತು ಕಾಂಗ್ರೆಸ್‍ಗೆ ಬಡವರೇ ಮತಬ್ಯಾಂಕ್. ಹಾಗಾಗಿ ಅವರು ಅಭಿವೃದ್ಧಿಯನ್ನು ವಿರೋಧಿಸುತ್ತಾರೆ.ನೀವು ಕಾಂಗ್ರೆಸ್‍ನ್ನು ತೆಗೆದುಹಾಕಿದರೆ, ಬಡತನ ನಿರ್ಮೂಲನೆ ಆಗುತ್ತದೆ.

ಪೀಳಿಗೆ ಬದಲಾದರೂ ಕಾಂಗ್ರೆಸ್ ಒಂದೇ ಒಂದು ಭರವಸೆಯನ್ನು ನೀಡುತ್ತದೆ.ಅದೇನೆಂದರೆ ಬಡತನದ ನಿರ್ಮೂಲನೆ.ಜನರು ಬಡವರಾಗುತ್ತಾ ಹೋಗುತ್ತಾರೆ, ಸಚಿವರು ಶ್ರೀಮಂತರಾಗುತ್ತಿದ್ದಾರೆ.

ಈ ಚುನಾವಣೆ ಯಾವುದೇ ಪಕ್ಷ ಅಥವಾ ನಾಯಕನನ್ನು ಆಯ್ಕೆ ಮಾಡುವುದಲ್ಲ,.ಇದು ಅಭಿವೃದ್ಧಿ, ನಾಳಿನ ಭವಿಷ್ಯ ಮತ್ತು ನಿಮ್ಮ ಆಸಕ್ತಿಯನ್ನು ಸುರಕ್ಷಿತಗೊಳಿಸುವುದಾಗಿದೆ.

ನಮ್ಮ ಪಕ್ಷದ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರ ರಚನೆಯಾಗಲಿ ಆಮೇಲೆ ವಲಸೆಗಾರರರು ನಾಡು ಎಂದು ಕರೆಯಲ್ಪಡುವ ಅಸ್ಸಾಂ ಪ್ರವಾಸೋದ್ಯಮದ ಹೆಸರಲ್ಲಿ ಖ್ಯಾತಿ ಗಳಿಸುತ್ತದೆ. ಕಾಂಗ್ರೆಸ್ ಭರವಸೆ ನೀಡಿರುವ ಕನಿಷ್ಠ ಆದಾಯ ಯೋಜನೆ ಬಗ್ಗೆ ಟೀಕೆ ಮಾಡಿದ ಮೋದಿ, ಕಾಂಗ್ರೆಸ್‍ನ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅದು ಹಣದುಬ್ಬರಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT