7

ಪ್ರಧಾನಿಗೆ ಟಾಂಗ್ ನೀಡುವುದಕ್ಕಾಗಿ ಕಾಂಗ್ರೆಸ್ ಟ್ವೀಟಿಸಿದ್ದು ಹಳೇ ವಿಡಿಯೊ!

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಜೈಪುರ ರ‍್ಯಾಲಿಯಲ್ಲಿ ಭಾಗವಹಿಸಿದ್ದ ವೇಳೆ ಬಿಜೆಪಿಗೆ ಟಾಂಗ್ ನೀಡಲು ಕಾಂಗ್ರೆಸ್ ವಿಡಿಯೊವೊಂದನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟು ಮುಜುಗರಕ್ಕೀಡಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿರುವ ವಿಡಿಯೊ ಆದಾಗಿತ್ತು.

ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ರಮ್ಯಾ ಈ ವಿಡಿಯೊವನ್ನು ಟ್ವೀಟ್ ಮಾಡಿ ಬಿಜೆಪಿಗೆ ಟಾಂಗ್ ನೀಡಿದ್ದರು.

ಸಾಮಾಜಿಕ ತಾಣದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಬಿಜೆಪಿ ಐಟಿ ಸೆಲ್ ಮುಖಂಡರಾದ ಅಮಿತ್ ಮಾಳವಿಯಾ, ಕಾಂಗ್ರೆಸ್ ಎಂದಿನಂತೆ ಸೆಲ್ಫ್ ಗೋಲ್ ಹೊಡೆದಿದೆ. 5 ವರ್ಷದ ಹಿಂದಿನ ವಿಡಿಯೊವನ್ನು ಅಪ್‍ಲೋಡ್ ಮಾಡಿ ಜೈಪುರದಲ್ಲಿ ಪ್ರಧಾನಿ ರ‍್ಯಾಲಿ ವೇಳೆ ನಡೆದ ಘಟನೆ ಇದು ಎಂದು ಕಾಂಗ್ರೆಸ್ ವಾದಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು

ವಿಡಿಯೊ ಹಳೆಯದ್ದು ಎಂದು ತಿಳಿದ ಕೂಡಲೇ ರಮ್ಯಾ, ನಾವು ತಪ್ಪು ಮಾಡಿದ್ದೇವೆ. ಆದರೆ ಇದರಲ್ಲಿರುವ ಸಂಗತಿ ಸತ್ಯವಾದುದು ಎಂದು ಟ್ವೀಟಿಸಿದ್ದರು. 

ಇದನ್ನೂ ಓದಿ

ಕಾಂಗ್ರೆಸ್‌ ‘ಬೇಲ್‌ ಗಾಡಿ’ ಇದ್ದಂತೆ: ಮೋದಿ ಲೇವಡಿ

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !