ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ| ಕೇರಳದಲ್ಲಿ ಯುವತಿ ಸ್ಥಿತಿ ಸ್ಥಿರ: ಶಂಕಿತ 20 ಮಂದಿ ಆಸ್ಪತ್ರೆಗೆ ದಾಖಲು

Last Updated 2 ಫೆಬ್ರುವರಿ 2020, 15:17 IST
ಅಕ್ಷರ ಗಾತ್ರ

ಕೇರಳ: ಚೀನಾದಿಂದ ವಾಪಸಾದ ಕೊರೊನಾ ವೈರಸ್ ಅಂಟಿದ ರೋಗಿ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಚೀನಾದ ನಗರ ಒಂದರಲ್ಲಿ ನೆಲೆಸಿದ್ದ ಯುವತಿ ಕಳೆದ ವಾರವಷ್ಟೆ ಕೇರಳಕ್ಕೆ ವಾಪಸಾಗಿದ್ದರು. ನಂತರ ರಕ್ತ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿತ್ತು.ಈಕೆಗೆ ತ್ರಿಸೂರ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಕೇರಳದಲ್ಲಿಇದುವರೆಗೆ ಕೊರೊನಾ ವೈರಸ್ ಶಂಕಿತ 20 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ನಡೆಯುತ್ತಿದ್ದು, 30 ಬಗೆಯ ವಿವಿಧ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲಾಗುವುದು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT