ಸೋಮವಾರ, ಮೇ 25, 2020
27 °C

ಕೊರೊನಾ: ಇರಾನ್‌ನಿಂದ 275 ಭಾರತೀಯರು ವಾಪಸ್, ರಾಜಸ್ಥಾನದಲ್ಲಿ ಕ್ವಾರಂಟೈನ್

ಪಿಟಿಐ Updated:

ಅಕ್ಷರ ಗಾತ್ರ : | |

ಜೋಧಪುರ: ಕೊರೊನಾ ವೈರಸ್ ಸೋಂಕು ಪೀಡಿತ ಇರಾನ್‌ನಿಂದ ವಾಪಸ್ ಕರೆಸಿಕೊಳ್ಳಲಾಗಿರುವ 275 ಭಾರತೀಯರು ಇಂದು ರಾಜಸ್ಥಾನದ ಜೋಧಪುರ ತಲುಪಿದ್ದಾರೆ. ದೆಹಲಿ ಮೂಲಕ ಜೋಧಪುರಕ್ಕೆ ಬಂದ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ವದೇಶಕ್ಕೆ ಬಂದವರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದ್ದು, ಬಳಿಕ ಜೋಧಪುರದಲ್ಲಿರುವ ಸೇನಾ ಸ್ವಾಸ್ಥ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.

275 ಜನರಲ್ಲಿ ನಾಲ್ವರು ಮಕ್ಕಳು, ಎರಡು ಶಿಶುಗಳು ಸೇರಿದಂತೆ 133 ಮಹಿಳೆಯರು ಮತ್ತು 142 ಮಂದಿ ಪುರುಷರು ಇದ್ದಾರೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

‘ಇರಾನ್‌ನಿಂದ ಕರೆಸಿಕೊಳ್ಳಲಾದ ಭಾರತೀಯರನ್ನು ಸ್ಪೈಸ್‌ಜೆಟ್ ಮತ್ತು ಇಂಡಿಗೊ ವಿಮಾನಗಳಲ್ಲಿ ಜೋಧಪುರಕ್ಕೆ ಕರೆದೊಯ್ಯಲಾಗಿದೆ. ಆಪರೇಷನ್ ನಮಸ್ತೆ! ಕೋವಿಡ್–19ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು