ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19: ಮಹಾರಾಷ್ಟ್ರದಲ್ಲಿ ಮತ್ತೊಂದು ಸಾವು; ದೇಶದಲ್ಲಿ ಸಾವಿನ ಸಂಖ್ಯೆ 18

Last Updated 26 ಮಾರ್ಚ್ 2020, 17:31 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ 19 ರೋಗದಿಂದಾಗಿ ಮಹಾರಾಷ್ಟ್ರದಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 18ಕ್ಕೆ ಏರಿದೆ. ಕೊರೊನಾ ಸೋಂಕಿನಿಂದಾಗಿಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 5 ಸಾವು ಸಂಭವಿಸಿದೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ 716ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಕಿನ್ಸ್‌ ಕೊರೊನಾ ವೈರಸ್‌ ಕೇಂದ್ರವು ಮಾಹಿತಿ ನೀಡಿದೆ. ಅದೇ ವೇಳೆಭಾರತದಲ್ಲಿ ಸೋಂಕು ಪ್ರಕರಣಗಳ ಏರಿಕೆ ದರವು ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.


ಕೊರೊನಾ ಸೋಂಕು ಸಾಮುದಾಯಿಕವಾಗಿ ಹರಡುತ್ತಿದೆ ಎಂದು ಹೇಳಲು ಗಟ್ಟಿ ಸಾಕ್ಷ್ಯಗಳು ಇಲ್ಲ. ಭಾರತದಲ್ಲಿ ಈ ಸೋಂಕು ಈಗಲೂ ಎರಡನೇ ಹಂತದಲ್ಲಿಯೇ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

‘ಇದು ಅತ್ಯಂತ ಸ್ಪಷ್ಟವಾಗಿ ಸಾಬೀತಾಗಿಲ್ಲ. ಸಾಮಾಜಿಕ ಅಂತರ ಕಾಪಾಡುವುದು, ಸೋಂಕಿತರ ಜತೆ ಸಂಪರ್ಕಕ್ಕೆ ಬಂದವರನ್ನು ಗುರುತಿಸುವುದು ಮತ್ತು ಮನೆ ಪ್ರತ್ಯೇಕವಾಸವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಮೂಲಕ ಸೋಂಕನ್ನು ನಿಭಾಯಿಸುವುದು ಸಾಧ್ಯವಾಗಬಹುದು’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್‌ವಾಲ್‌ ಹೇಳಿದ್ದಾರೆ.

ಜಗತ್ತಿನಾದ್ಯಂತ 175 ದೇಶಗಳಿಗೆ ಈ ಪಿಡುಗು ಹರಡಿದೆ. 22,169 ಜನರು ಮೃತಪಟ್ಟಿದ್ದಾರೆ ಮತ್ತು 4.91 ಲಕ್ಷ ಜನರಿಗೆ ಸೋಂಕು ತಗಲಿದೆ. 1.18 ಲಕ್ಷ ಜನರು ಕೋವಿಡ್‌ 19 ರೋಗದಿಂದ ಗುಣಮುಖರಾಗಿದ್ದಾರೆ.
ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವನ್ನು ಏಪ್ರಿಲ್‌ 14ರವರೆಗೆ ಭಾರತ ಸರ್ಕಾರ ವಿಸ್ತರಿಸಿದೆ. ಈ ಹಿಂದೆ, ಮಾರ್ಚ್‌ 29ರವರೆಗೆ ನಿಷೇಧ ಹೇರಲಾಗಿತ್ತು.
***
ಆರ್ಥಿಕ ಗುರಿಯ ಬದಲು ಜನರತ್ತ ಗಮನ ಕೇಂದ್ರೀಕರಿಸೋಣ: ಮೋದಿ
ಆರ್ಥಿಕ ಗುರಿ ಬದಲು ಜನರತ್ತ ಗಮನ ಕೇಂದ್ರೀಕರಿಸೋಣ ಎಂದು ಜಿ20 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ. ಕೋವಿಡ್19 ಜಾಗತೀಕರಣದ ಹೊಸ ಆಶಯದತ್ತ ನೋಡುವಂತೆ ಮಾಡಿದೆ. ನಾವು ಆರ್ಥಿಕ ಮತ್ತು ಹಣಕಾಸು ವಿಚಾರಗಳ ಹೊರತಾಗಿ ಮಾನವೀಯತೆ, ಹವಾಮಾನ ವೈಪರೀತ್ಯ, ಭಯೋತ್ಪಾದನೆ ವಿಷಯದತ್ತ ಗಮನ ಹರಿಸಬೇಕಿದೆ ಎಂದಿದ್ದಾರೆ ಮೋದಿ.

ಅನ್ಯರಾಜ್ಯದಿಂದ ವಲಸೆ ಬಂದ ಕಾರ್ಮಿತಕರಿಗೆ ಊಟ ನೀಡಲು ಯೋಗಿ ಆದಿತ್ಯನಾಥ ಆದೇಶ
ಲಖನೌ: ದೇಶವ್ಯಾಪಿ ಲಾಕ್‌ಡೌನ್‌ನಿಂದಾಗಿ ಊರಿಗೆ ಮರಳುತ್ತಿರುವ ಅನ್ಯರಾಜ್ಯದಿಂದ ವಲಸೆ ಬಂದಿರುವ ಕಾರ್ಮಿಕರಿಗೆ ಅನ್ನ ಮತ್ತು ನೀರು ನೀಡವಂತೆ 75 ಜಿಲ್ಲೆಗಳ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಆದೇಶಿಸಿದ್ದಾರೆ.
ದಿನಗೂಲಿ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ ಊರು ಸೇರಲು ಹಲವಾರು ಕಿಲೋಮೀಟರ್‌ಗಳನ್ನು ಕ್ರಮಿಸುತ್ತಿದ್ದಾರೆ. ಈ ಜನರು ಉತ್ತರಪ್ರದೇಶದಲ್ಲಿಯೇ ಉಳಿದರೆ ಅವರಿಗೆ ಅಗತ್ಯ ಆಹಾರ, ಔಷಧಿ ಮತ್ತು ಭದ್ರತೆ ನೀಡುವುದಾಗಿ ಆದಿತ್ಯನಾಥ ಅವರು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಭರವಸೆ ನೀಡಿದ್ದಾರೆ.


ಪ್ರಧಾನಿ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ಕೇಂದ್ರ ಸಚಿವ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ನಿಶಂಕ್ ಅವರು ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿಯವರ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ದೇಣಿಗೆಯಾಗಿ ನೀಡಿದ್ದಾರೆ.ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ, ಜನರಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ನೀಡುತ್ತಿದ್ದೇನೆ, ಇನ್ನು ಅಗತ್ಯ ಬಂದರೆ ನಾನು ಜನರಿಗಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಕರ್ಫ್ಯೂ ಇ-ಪಾಸ್
ನವದೆಹಲಿ: ಕರ್ಫ್ಯೂ ಪಾಸ್ ಪಡೆಯಲು ಪೊಲೀಸ್ ಠಾಣೆಯ ಮುಂದೆ ಜನ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಇ-ಪಾಸ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ, ಅದೇ ವೇಳೆ ರಾಜ್ಯದ ಜಾರಿ ನಿರ್ದೇಶನಾಲಯ ಸಂಸ್ಥೆ, ಪೊಲೀಸರಿಂದ ಕಿರುಕುಳಕ್ಕೊಳಗಾದರೆ ಈ ಬಗ್ಗೆ ದೂರು ನೀಡಲು ಸಹಾಯವಾಣಿಯನ್ನು ಆರಂಭಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT