ಭಾನುವಾರ, ಜೂಲೈ 5, 2020
27 °C

ಅತಿ ಹೆಚ್ಚು ಕೊರೊನಾ ಪ್ರಕರಣ: ಅಗ್ರ ಹತ್ತರ ಪಟ್ಟಿಯಲ್ಲಿ ಭಾರತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸತತ ಎರಡನೇ ದಿನ ಆರು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಅತಿ ಹೆಚ್ಚು ಮಂದಿಗೆ ಕೊರೊನಾ ತಗುಲಿರುವ ಅಗ್ರ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಗುರುತಿಸಿಕೊಂಡಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 1,37,000 ದಾಟಿದ್ದು, ಸಾವಿನ ಸಂಖ್ಯೆ 4,000 ಗಡಿ ದಾಟಿದೆ.

ಸುಮಾರು 75,700 ಸಕ್ರಿಯ ಪ್ರಕರಣಗಳೊಂದಿಗೆ ಭಾರತ ಸದ್ಯ ಐದನೇ ಸ್ಥಾನದಲ್ಲಿದೆ. ಮೊದಲ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ, ರಷ್ಯಾ, ಬ್ರೆಜಿಲ್ ಹಾಗೂ ಫ್ರಾನ್ಸ್ ಇವೆ.

ಜಾಗತಿಕವಾಗಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 28 ಲಕ್ಷ ಮೀರಿದ್ದು, ಈ ಪೈಕಿ 11 ಲಕ್ಷಕ್ಕೂ ಹೆಚ್ಚು ಸೋಂಕಿತರು ಅಮೆರಿಕದವರಾಗಿದ್ದಾರೆ.

61 ದಿನಗಳ ಲಾಕ್‌ಡೌನ್‌ ಹೊರತಾಗಿಯೂ ಸೋಂಕು ಉಲ್ಬಣಿಸಿದೆ ಎಂದು ಮಾರ್ಚ್‌ 24ರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಇದನ್ನೂ ಓದಿ: 14ರಿಂದ 29 ಲಕ್ಷ ಕೋವಿಡ್–19 ಪ್ರಕರಣ ತಪ್ಪಿಸಿದೆ ಲಾಕ್‌ಡೌನ್‌: ಕೇಂದ್ರ

ದೆಹಲಿಯಲ್ಲಿ ನಡೆದಿದ್ದ ತಬ್ಲೀಗ್ ಜಮಾತ್‌ ಸಭೆ ಮತ್ತು ತಮಿಳುನಾಡಿನ ಕೊಯಂಬೇಡು ಸಗಟು ಮಾರುಕಟ್ಟೆಯಿಂದ ತೆರಳಿದವರ ಮೂಲಕ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಎರಡು ತಿಂಗಳ ಲಾಕ್‌ಡೌನ್ ಮಹತ್ವದ ಪರಿಣಾಮ ಬೀರಿತ್ತು. ಈ ಎರಡು ಕಡೆಗಳಿಂದ ತೆರಳಿದವರ ಮೂಲಕ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಹಲವು ಕಡೆಗಳಲ್ಲಿ ಸೋಂಕು ಹರಡಿತ್ತು.

ಸದ್ಯ, ಏಷ್ಯಾದ ಅತಿ ದೊಡ್ಡ ಕೊಳಗೇರಿ ಎಂದೇ ಪರಿಗಣಿಸಲಾಗಿರುವ ಮುಂಬೈನ ಧಾರಾವಿ ಸಮಸ್ಯೆಯ ಕೇಂದ್ರ ಬಿಂದುವಾಗಿದೆ. ಭಾನುವಾರ ಮಹಾರಾಷ್ಟ್ರದಲ್ಲಿ 3,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿದ್ದವು.

ಆದರೆ, ಲಾಕ್‌ಡೌನ್‌ ನಿಯಮಗಳ ಸಡಿಲಿಕೆಯ ಹೊರತಾಗಿಯೂ ಸೋಂಕು ಹರಡುವಿಕೆಯ ಹೆಚ್ಚಳ ಪ್ರಮಾಣ ಕಡಿಮೆಯಾಗಿದೆ ಎಂದು ಚೆನ್ನೈನ ಮ್ಯಾಥಮ್ಯಾಟಿಕಲ್ ಸೈನ್ಸಸ್‌ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಸೋಂಕು ಮುನ್ಸೂಚನೆ ಮಾದರಿಯೊಂದರ ಮೂಲಕ ನಿರೂಪಿಸಿದ್ದಾರೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು