ಮಂಗಳವಾರ, ಫೆಬ್ರವರಿ 18, 2020
16 °C

ಮುಂಬೈಯಲ್ಲಿ ಇಬ್ಬರಿಗೆ ಕೊರೊನಾ ವೈರಸ್‌ ಶಂಕೆ: ಪ್ರತ್ಯೇಕ ವಾರ್ಡ್‌ನಲ್ಲಿ ನಿಗಾ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಚೀನಾದಿಂದ ವಾಪಸಾದ ಇಬ್ಬರಿಗೆ ಕೊರೊನಾ ವೈರಸ್‌ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರನ್ನೂ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 19ರ ಬಳಿಕ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 1,789 ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ (thermal screening) ಒಳಪಡಿಸಲಾಗಿದೆ. ಆ ಪೈಕಿ ಚೀನಾದಿಂದ ಬಂದ ಇಬ್ಬರನ್ನು ಚಿಂಚ್‌ಪೋಕಲಿಯ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಈವರೆಗೆ ಯಾವ ಪ್ರಯಾಣಿಕರಲ್ಲಿಯೂ, ಚೀನಾದ ವುಹಾನ್ ನಗರಕ್ಕೆ 14 ದಿನ ಹಿಂದೆ ಭೇಟಿ ನೀಡಿದ್ದವರಲ್ಲಿಯೂ ಕೊರೊನಾ ವೈರಸ್ ಇರುವುದು ಥರ್ಮಲ್ ಸ್ಕ್ಯಾನಿಂಗ್ ವೇಳೆ ಕಂಡುಬಂದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಹುಬೆಯಿ ಪ್ರಾಂತ್ಯದ ವುಹಾನ್‌ ನಗರದಲ್ಲಿ ಕೊರೊನಾ ವೈರಸ್ ಮೊದಲು ಪತ್ತೆಯಾಗಿತ್ತು.

ಇದನ್ನೂ ಓದಿ: Explainer | ಚೀನಾದಲ್ಲಿ ಆತಂಕ ಮೂಡಿಸಿದ ಕೊರೊನಾ ವೈರಸ್‌

ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾದ ಬಗ್ಗೆ ವರದಿಯಾದ ಬೆನ್ನಲ್ಲೇ ಮುಂಬೈನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲು ಬೃಹನ್ಮುಂಬೈ ಕಾರ್ಪೊರೇಷನ್ (ಬಿಂಎಸಿ) ಸೂಚಿಸಿತ್ತು.

‘ಕೊರೊನಾ ವೈರಸ್ ತಗುಲಿರುವ ಶಂಕೆಯುಳ್ಳ ವ್ಯಕ್ತಿಗಳ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ ಆರಂಭಿಸಲಾಗಿದೆ. ಶೀತ ಮತ್ತು ಕಫ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ಇಬ್ಬರನ್ನು ವಾರ್ಡ್‌ನಲ್ಲಿರಿಸಿ ಅವರ ಮೇಲೆ ನಿಗಾ ಇರಿಸಲಾಗಿದೆ’ ಎಂದು ಬಿಎಂಸಿಯ ಕಾರ್ಯನಿರ್ವಾಹಕ ಆರೋಗ್ಯಾಧಿಕಾರಿ ಡಾ. ಪದ್ಮಜಾ ಕೇಸ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ವೈರಸ್‌: ಸಾವಿನ ಸಂಖ್ಯೆ 25ಕ್ಕೆ ಏರಿಕೆ, 830 ಜನರಿಗೆ ಸೋಂಕು

ಅದೇ ರೀತಿ ಚೀನಾದಿಂದ ಬರುವ ಪ್ರಯಾಣಿಕರನ್ನು ಪ್ರತ್ಯೇಕ ವಾರ್ಡ್‌ಗೆ ಕಳುಹಿಸುವಂತೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವೈದ್ಯರಿಗೆ ಸೂಚಿಸಲಾಗಿದೆ. ನಗರದಲ್ಲಿರುವ ಎಲ್ಲ ಖಾಸಗಿ ವೈದ್ಯರಿಗೂ ಜಾಗೃತರಾಗಿರಲು ಸೂಚಿಸಲಾಗಿದೆ’ ಎಂದು ಕೇಸ್ಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು