ಅಪರಾಧಿಗೆ ಟಿಕೆಟ್ ನೀಡುವ ಪಕ್ಷದ ಮಾನ್ಯತೆ ರದ್ದು ಮಾಡಬಹುದೇ: ಸುಪ್ರೀಂ ಕೋರ್ಟ

7

ಅಪರಾಧಿಗೆ ಟಿಕೆಟ್ ನೀಡುವ ಪಕ್ಷದ ಮಾನ್ಯತೆ ರದ್ದು ಮಾಡಬಹುದೇ: ಸುಪ್ರೀಂ ಕೋರ್ಟ

Published:
Updated:

ನವದೆಹಲಿ: ‘ಚುನಾವಣೆಯಲ್ಲಿ ಸ್ಪರ್ಧಿಸಲು ಅಪರಾಧಿಗಳಿಗೆ ಟಿಕೆಟ್ ನೀಡುವ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದು ಮಾಡುವಂತೆ ಚುನಾವಣಾ ಆಯೋಗಕ್ಕೆ ನಾವು ನಿರ್ದೇಶನ ನೀಡಬಹುದೇ’ ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ.

ರಾಜಕಾರಣವು ಅಪರಾಧಿಗಳಿಂದ ತುಂಬುತ್ತಿರುವುದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಸ್ವಯಂಸೇವಾ ಸಂಸ್ಥೆ ‘ಪಿಐಎಲ್ ಫೌಂಡೇಷನ್’ ಅರ್ಜಿ ಸಲ್ಲಿಸಿತ್ತು. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಸದಸ್ಯರ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದೆ.

ರಾಜಕಾರಣದಲ್ಲಿ ಅಪರಾಧಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸುಪ್ರೀಂ ಕೋರ್ಟ್‌ ಏನೆಲ್ಲಾ ಮಾಡಬಹುದು ಎಂದು ಪೀಠವು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರನ್ನು ಕೇಳಿತು.

‘ಚುನಾವಣೆಯಲ್ಲಿ ಸ್ಪರ್ಧಿಸಲು ಅಪರಾಧಿಗೆ ಅವಕಾಶ ನೀಡಬೇಡಿ ಎಂದು ಚುನಾವಣಾ ಆಯೋಗಕ್ಕೆ ನಾವು ನಿರ್ದೇಶನ ನೀಡಬಹುದೇ? ನಾವು ಅಂತಹ ಆದೇಶಗಳನ್ನು ನೀಡಬಹುದೇ? ಅಥವಾ ಅಪರಾಧಿಗಳಿಗೆ ಪಕ್ಷಗಳು ಟಿಕೆಟ್ ನೀಡುವುದನ್ನು ತಡೆಯುವಂತಹ ಕಾನೂನನ್ನು ರಚಿಸಿ ಎಂದು ಸಂಸದರಿಗೆ ಸಲಹೆ ನೀಡಬಹುದೇ’ ಎಂದು ಪೀಠವು ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿತು.

‘ಕೆಲವು ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ವಿಚಾರಣೆ 10–15 ವರ್ಷಗಳಿಂದ ನಡೆಯುತ್ತಲೇ ಇದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !