ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

COVID-19| ಏರ್‌ ಇಂಡಿಯಾದ ಅಂಗಸಂಸ್ಥೆಯ ಉದ್ಯೋಗಿಗೆ ಕೊರೊನಾ ಸೋಂಕು

Last Updated 30 ಮಾರ್ಚ್ 2020, 2:30 IST
ಅಕ್ಷರ ಗಾತ್ರ

ನವದೆಹಲಿ:ಏರ್ ಇಂಡಿಯಾದ ಅಂಗಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ಭಾನುವಾರ ಪತ್ತೆಯಾಗಿದೆ.

ಕೊರೊನಾ ಸೋಂಕು ಹೊಂದಿರುವ ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ (ಎಐಎಟಿಎಸ್ಎಲ್) ನ ಮಹಿಳಾ ಉದ್ಯೋಗಿಯನ್ನು ಜೋಗೇಶ್ವರಿಯ ಬಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಐಎಟಿಎಸ್ಎಲ್ ಸಂಸ್ಥೆಯು ಏರ್ ಇಂಡಿಯಾದ ಭೂ-ಚಟುವಟಿಕೆಗಳನ್ನು ನಿರ್ವಹಿಸುವ ಅಂಗಸಂಸ್ಥೆಯಾಗಿದೆ.

ಕಳೆದ ಬುಧವಾರದಿಂದ ವಿಮಾನಗಳ ಹಾರಾಟವನ್ನು ಸರ್ಕಾರವು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಮೊದಲು ಈ ಮಹಿಳಾ ಉದ್ಯೋಗಿಯು ಏರ್ ಇಂಡಿಯಾದ ಕೊನೆಯ ವಿಮಾನದಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT