ಭಾನುವಾರ, ಏಪ್ರಿಲ್ 5, 2020
19 °C

ಕೋವಿಡ್–19 ಭೀತಿ | 200 ರೈಲು ಸಂಚಾರ ರದ್ದು, ಇಲಾಖೆಗೆ ₹450 ಕೋಟಿ ನಷ್ಟ ಸಾಧ್ಯತೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ಭೀತಿಯಿಂದಾಗಿ ಸುಮಾರು 200 ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ರದ್ದು ಮಾಡಿದೆ. ಇದರಿಂದಾಗಿ ಮಾರ್ಚ್‌ ತಿಂಗಳಲ್ಲಿ ಸುಮಾರು ₹ 450 ಕೋಟಿ ನಷ್ಟ ಸಂಭವಿಸಲಿದೆ ಎಂದು ಮೂಲಗಳು ತಿಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ.

ಈ ತಿಂಗಳಲ್ಲಿ ಸೋಂಕು ಭೀತಿಯಿಂದಾಗಿ ಟಿಕೆಟ್‌ ರದ್ದು ಪಡಿಸಿದವರ ಸಂಖ್ಯೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾರ್ಚ್‌ 1 ರಿಂದ 12ರ ಅವಧಿಯಲ್ಲಿ ಕೇವಲ ಉತ್ತರ ರೈಲ್ವೆ ವಲಯದಲ್ಲಿಯೇ ಸುಮಾರು 12 ಲಕ್ಷ ಟಿಕೆಟ್‌ಗಳು ರದ್ದಾಗಿವೆ. 

ಜನರು ಅನವಶ್ಯಕವಾಗಿ ಪ್ರಯಾಣಿಸುವುದನ್ನು ತಪ್ಪಿಸಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.

ರಿಯಾಯಿತಿ ದರದಲ್ಲಿ ಬುಕ್‌ ಮಾಡಿಕೊಂಡಿದ್ದ ಮೀಸಲು ಹಾಗೂ ಮೀಸಲು ರಹಿತ ಟಿಕೆಟ್‌ಗಳನ್ನು ಮಾರ್ಚ್‌ 20ರ ಬಳಿಕ ರದ್ದು ಮಾಡಿಕೊಂಡಿರುವ ಹಿರಿಯ ನಾಗರಿಕರಿಕರಿಗೆ ಮುಂದಿನ ಸೂಚನೆಗಳು ಬರುವವರೆಗೆ ಹಣ ಹಿಂದಿರುಗಿಸಲಾಗುವುದು.

ಜಗತ್ತಿನಾದ್ಯಂತ ಇದುವರೆಗೆ ಸುಮಾರು 2,09,839 ಜನರಲ್ಲಿ ಸೊಂಕು ಪತ್ತೆಯಾಗಿದ್ದು, 8,778 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಇನ್ನೂರು ದಾಟಿದೆ. ಐದು ಮಂದಿ ಸಾವನ್ನಪ್ಪಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು