ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲನೆ ದೊರೆತ ಮರುದಿನವೇ ‘ ಟ್ರೈನ್‌ 18’ನಲ್ಲಿ ತಾಂತ್ರಿಕ ದೋಷ

Last Updated 16 ಫೆಬ್ರುವರಿ 2019, 17:55 IST
ಅಕ್ಷರ ಗಾತ್ರ

ನವದೆಹಲಿ: ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ತಯಾರಾದ ಭಾರತದ ಮೊದಲ ಸೆಮಿಸ್ಪೀಡ್‌ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ (ಟ್ರೈನ್‌ 18) ಚಾಲನೆ ದೊರೆತ ಮರುದಿನವೇ ರೈಲಿನಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದೆ.

ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ ಈ‘ ಟ್ರೈನ್‌ 18’ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

‘ಚಕ್ರಗಳು ಜಾರಿದ್ದರಿಂದ (ಸ್ಕಿಡ್‌) ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಎಂಜಿನಿಯರ್‌ಗಳು ಪರಿಶೀಲನೆ ನಡೆಸಿದ್ದಾರೆ’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಶನಿವಾರ ಬೆಳಿಗ್ಗೆ 6.30ಕ್ಕೆ ವಾರಾಣಸಿಯಿಂದ ಹೊರಟು ದೆಹಲಿಯತ್ತ ಸಂಚರಿಸುತ್ತಿದ್ದಾಗಉತ್ತರ ಪ್ರದೇಶದ ತುಂಡ್ಲಾ ಜಂಕ್ಷನ್‌ನಿಂದ 15 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ರೈಲು ಹಳಿ ಮೇಲೆ ಹಸುಗಳು ಓಡಿದಾಗ ಚಕ್ರ ಸ್ಕಿಡ್‌ ಆಗಿದೆ’ ಎಂದು ಉತ್ತರ ವಿಬಾಗ ರೈಲ್ವೆ ಅಧಿಕಾರಿ ದೀಪಕ್‌ ಕುಮಾರ್‌ ತಿಳಿಸಿದ್ದಾರೆ.

ಎಂಜಿನಿಯರ್‌ಗಳು ಪರಿಶೀಲಿಸಿ ತಾಂತ್ರಿಕ ದೋಷ ನಿವಾರಿಸಿದ ನಂತರ ರೈಲು ಬೆಳಿಗ್ಗೆ 8.15ರ ಸುಮಾರಿಗೆ ದೆಹಲಿ ಕಡೆಗೆ ಪ್ರಯಾಣ ಬೆಳೆಸಿತು.

‘ಹಳಿ ಮೇಲೆ ಹಸುಗಳು ಓಡಿದ್ದರಿಂದಲೇ ಈ ಅಡ್ಡಿ ಉಂಟಾಗಿದೆ’ ಎಂದು ರೈಲ್ವೆ ನಿರ್ವಹಣಾ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

‘ಮೋದಿ ಸರ್ಕಾರದ ಆಡಳಿತಕ್ಕೆ ಈ ರೈಲು ಉತ್ತಮ ಉದಾಹರಣೆ. ಅಪಾರ ಪ್ರಚಾರ ಪಡೆದುಕೊಂಡಿತ್ತು ಆದರೆ ವಾಸ್ತವ ದುರಂತ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟ್ವಿಟರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT