ಯೋಧನ ಅಪಹರಣ ವರದಿ ಸುಳ್ಳು: ರಕ್ಷಣಾ ಸಚಿವಾಲಯ ಸ್ಪಷ್ಟನೆ

ಮಂಗಳವಾರ, ಮಾರ್ಚ್ 26, 2019
31 °C

ಯೋಧನ ಅಪಹರಣ ವರದಿ ಸುಳ್ಳು: ರಕ್ಷಣಾ ಸಚಿವಾಲಯ ಸ್ಪಷ್ಟನೆ

Published:
Updated:

ಶ್ರೀನಗರ: ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಉಗ್ರರು ಯೋಧರೊಬ್ಬರನ್ನು ಅಪಹರಿಸಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿರುವ ರಕ್ಷಣಾ ಸಚಿವಾಲಯ, ‘ಯೋಧ ಸುರಕ್ಷಿತರಾಗಿದ್ದಾರೆ‌’ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಲೈಟ್‌ ಇನ್‌ಫಾಂಟ್ರಿ ರೆಜಿಮೆಂಟ್‌ಗೆ ನಿಯೋಜನೆಗೊಂಡಿದ್ದ ಯೋಧ ಮೊಹಮ್ಮದ್‌ ಯಾಸಿನ್‌ ಅವರನ್ನು ಖ್ವಾಜಿಪೋರಾ ದಲ್ಲಿರುವ ಅವರ ಮನೆಯಿಂದ ಕೆಲವರು ಕರೆದೊಯ್ದಿದ್ದಾರೆ ಎಂದು ಕುಟುಂಬ ಸದಸ್ಯರು ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಾಸಿನ್‌ ಅವರು ರಜೆಯಲ್ಲಿದ್ದರು.

‘ಯಾಸಿನ್‌ ಅವರನ್ನು ಉಗ್ರರು ಅಪಹರಿಸಿದ್ದಾರೆ ಎಂಬ ವರದಿ ಸುಳ್ಳು. ಇಂತಹ ಊಹನಾತ್ಮಕ ವರದಿಗಳನ್ನು ಕೈಬಿಡಿ’ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಟ್ವೀಟ್‌ ಮಾಡಿದ್ದಾರೆ.

‘ಶುಕ್ರವಾರ ರಾತ್ರಿ ಯಾಸಿನ್‌ ಎಲ್ಲಿದ್ದರು ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಸುತ್ತಿದ್ದೇವೆ’ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !