ಸೋಮವಾರ, ಸೆಪ್ಟೆಂಬರ್ 20, 2021
29 °C
₹ 3,000 ಕೋಟಿಯ ಸೇನಾಸಲಕರಣೆ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

ಭಾರತೀಯ ನೌಕಾಪಡೆಗೂ ಬ್ರಹ್ಮೋಸ್‌ ಬಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ₹ 3,000 ಕೋಟಿ ಮೊತ್ತದ ಸೇನಾ ಸಲಕರಣೆಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈ ಸಲಕರಣೆಗಳಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಕ್ಷಣಾ ವಾಹನಗಳು ಸೇರಿವೆ.

ಯುದ್ಧನೌಕೆಗಳಿಗಾಗಿ ಬ್ರಹ್ಮೋಸ್

ಭಾರತವು ಎರಡು ಅತ್ಯಾಧುನಿಕ ಯುದ್ಧನೌಕೆಗಳನ್ನ ಖರೀದಿಸುತ್ತಿದೆ. ಈ ಯುದ್ಧನೌಕೆಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ.

‘ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ಈಗಾಗಲೇ ಸಾಬೀತಾಗಿದೆ. ನೌಕಾಪಡೆಗಾಗಿ ಖರೀದಿಸುತ್ತಿರುವ ಎರಡು ಯುದ್ಧನೌಕೆಗಳಲ್ಲಿ ಈ ಕ್ಷಿಪಣಿಯೇ ಪ್ರಧಾನ ಅಸ್ತ್ರವಾಗಿರಲಿದೆ’ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.

** 

3,700 ಕಿ.ಮೀ. ಈ ಕ್ಷಿಪಣಿಯ ಗರಿಷ್ಠ ವೇಗ. ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ

290 ಕಿ.ಮೀ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ

200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ

**

ಎಆರ್‌ವಿಗಳು

ಭಾರತೀಯ ಭೂ ಸೇನೆಯ ಅರ್ಜುನ ಟ್ಯಾಂಕ್‌ಗಳ ನೆರವಿಗೆಂದು ಅರ್ಮರ್ಡ್ ರಿಕವರಿ ವೆಹಿಕಲ್–ಎಆರ್‌ವಿಗಳನ್ನು (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಖರೀದಿಸಲು ಸಚಿವಾಲಯವು ಒಪ್ಪಿಗೆ ನೀಡಿದೆ. ಅರ್ಜುನ ಟ್ಯಾಂಕ್‌ಗಳು ಕೆಟ್ಟು ನಿಂತಾಗ, ದುರ್ಗಮ ಸ್ಥಳದಲ್ಲಿ ಸಿಲುಕಿದಾಗ ಅವನ್ನು ಅಲ್ಲಿಂದ ಹೊರಗೆ ತರಲು ಎಆರ್‌ವಿಗಳನ್ನು ಬಳಸಲಾಗುತ್ತದೆ.

ಈಗ ಖರೀದಿಸಲು ಉದ್ದೇಶಿಸಿರುವ ಎಆರ್‌ವಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಿಡಿಸಿದೆ. ಈ ವಾಹನಗಳನ್ನು ಭಾರತ್ ಅರ್ಥ ಮೂವರ್ಸ್‌ ಲಿಮಿಟೆಡ್ ತಯಾರಿಸುತ್ತದೆ

20 ಟನ್ ಎಳೆಯುವ ಸಾಮರ್ಥ್ಯ

8 ಟನ್ ಭಾರ ಎತ್ತುವ ಸಾಮರ್ಥ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು