ಭಾನುವಾರ, ಆಗಸ್ಟ್ 18, 2019
26 °C

ಸಂಜೋತಾ ಎಕ್ಸ್‌ಪ್ರೆಸ್ ನಂತರ ದೆಹಲಿ- ಲಾಹೋರ್ ಬಸ್ ಸೇವೆ ರದ್ದು 

Published:
Updated:

ದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷಾಧಿಕಾರ ರದ್ದು ಮಾಡಿದ್ದಕ್ಕಾಗಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಲು ಪಾಕಿಸ್ತಾನ ತೀರ್ಮಾನಿಸಿದ ಬೆನ್ನಲ್ಲೇ ದೆಹಲಿ- ಲಾಹೋರ್ ಬಸ್ ಸೇವೆ ರದ್ದಾಗಿದೆ.

 ಸೋಮವಾರದಿಂದ ಬಸ್ ಸೇವೆ ರದ್ದುಗೊಳಿಸುವುದಾಗಿ ಪಾಕಿಸ್ತಾನದ ಹಿರಿಯ ಸಚಿವರು ಶನಿವಾರ ಹೇಳಿದ್ದರು. ಸೋಮವಾರ ಬೆಳಗ್ಗೆ  6 ಗಂಟೆಗೆ ದೆಹಲಿ ಸಾರಿಗೆ ಸಂಸ್ಥೆ(ಡಿಟಿಸಿ) ಬಸ್ ಲಾಹೋರ್‌ಗೆ ಹೊರಡುವುದು ನಿಗದಿಯಾಗಿತ್ತು. ಆದರೆ ಬಸ್ ಸೇವೆ ರದ್ದುಗೊಳಿಸುವುದಾಗಿ ಪಾಕ್ ನಿರ್ಧರಿಸಿದ್ದರಿಂದ ಬಸ್ ಹೊರಡಲಿಲ್ಲ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ದೆಹಲಿ- ಲಾಹೋರ್ ಬಸ್ ಸೇವೆ ಸ್ಥಗಿತಗೊಳಿಸುವ ಪಾಕ್ ನಿರ್ಧಾರದ ಹಿನ್ನೆಲೆಯಲ್ಲಿ ಆಗಸ್ಟ್ 12ರಂದು ಡಿಟಿಸಿ ಬಸ್ ಕಳುಹಿಸಿಲ್ಲ ಎಂದು ಡಿಟಿಸಿ ಹೇಳಿಕೆ ನೀಡಿದೆ.

ಇದನ್ನೂ ಓದಿ: ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಗೊಳಿಸಿದ ಪಾಕಿಸ್ತಾನ

ಪಾಕಿಸ್ತಾನದ  ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಶನಿವಾರ ಡಿಟಿಸಿಗೆ ಫೋನ್ ಕರೆ ಮಾಡಿ ಬಸ್ ಸೇವೆ ರದ್ದು ಮಾಡುವ ತೀರ್ಮಾನ ತಿಳಿಸಿತ್ತು.

ಶನಿವಾರ ದೆಹಲಿಯಿಂದ ಲಾಹೋರ್‌ಗಿರುವ ಕೊನೆಯ ಬಸ್ ಸಂಚಾರ ನಡೆಸಿತ್ತು. ಬಸ್ ಆ ಕಡೆ ಹೋಗುವಾಗ ಇಬ್ಬರು ಪ್ರಯಾಣಿಕರಿದ್ದರು.ಆದರೆ ಸಂಜೆ ಅಲ್ಲಿಂದ ವಾಪಸ್ ಬರುವಾಗ 19 ಪ್ರಯಾಣಿಕರಿದ್ದರು. ಭಾನುವಾರ ಯಾವುದೇ ಬಸ್ ಈ ದಾರಿಯಲ್ಲಿ ಓಡಾಡಿಲ್ಲ.

1999 ಫೆಬ್ರುವರಿಯಲ್ಲಿ  ಈ ಬಸ್ ಸೇವೆ ಆರಂಭವಾಗಿದ್ದು 2001ರಲ್ಲಿ ಸಂಸತ್ ಮೇಲೆ ದಾಳಿಯಾದಾಗ ಬಸ್ ಸೇವೆ ರದ್ದು ಮಾಡಲಾಗಿತ್ತು.ಆನಂತರ  2003 ಜುಲೈ ತಿಂಗಳಲ್ಲಿ ಬಸ್ ಸೇವೆ ಪುನರಾರಂಭಗೊಂಡಿತ್ತು.

ಇದನ್ನೂ ಓದಿ:  ಸಂಜೋತಾ ನಂತರ ಥಾರ್ ಎಕ್ಸ್‌ಪ್ರೆಸ್ ರದ್ದು ಮಾಡಲು ಪಾಕ್ ನಿರ್ಧಾರ

Post Comments (+)