ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನಿಂದ ಅಳುವ 3 ವರ್ಷದ ಮಗಳಿಗೆ ಮದ್ಯ ಕೊಟ್ಟು ಮಲಗಿಸಿದ ತಂದೆ!

ಪುಟಾಣಿಯನ್ನು ರಕ್ಷಿಸಿದ ಮಹಿಳಾ ಆಯೋಗ
Last Updated 7 ಏಪ್ರಿಲ್ 2019, 3:23 IST
ಅಕ್ಷರ ಗಾತ್ರ

ನವದೆಹಲಿ:ವಿರ್ಸಜನೆಯಾದ ಮಲಮೂತ್ರದ ನಡುವೆಯೇ ಮಲಗಿದ್ದ ಪುಟಾಣಿ, ಕುಡಿದು ಜಗತ್ತಿನ ಪರಿವೆಯೇ ಇಲ್ಲದಂತೆ ಬಿದ್ದಿದ್ದ ತಂದೆ...ಹೀಗೆ ತಂದೆಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೂರು ವರ್ಷದ ಹುಡುಗಿಯನ್ನು ದೆಹಲಿಯ ಮಹಿಳಾ ಆಯೋಗ ರಕ್ಷಿಸಿದೆ.

ಮಲಮೂತ್ರ ವಿಸರ್ಜನೆಯಾದರೂ ಎಷ್ಟೋ ದಿನಗಳಿಂದ ಬದಲಿಸದ ಡೈಪರ್‌, ಸ್ನಾನವಿಲ್ಲ, ಕೊಳಕು ತೆಗೆದಿಲ್ಲ. ಇದರಿಂದ ಪುಟಾಣಿಯ ಆರೋಗ್ಯ ಹದಗೆಟ್ಟಿದ್ದು, ಹಲವು ಭಾಗಗಳಲ್ಲಿ ಸೋಂಕು ಉಂಟಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಿಳಾ ಆಯೋಗ ತಿಳಿಸಿದೆ.

ಪುಟಾಣಿ ಹೊಟ್ಟೆ ಹಸಿವಿನಿಂದ ಅಳುತ್ತಿದ್ದರೆ, ತಂದೆ ಹಾಲಿನ ಬಾಟಲಿಗೆ ಮದ್ಯ ತುಂಬಿಸಿ ಆಕೆಯ ಬಾಯಿಗೆ ಇಡುತ್ತಿದ್ದ ಎಂದು ನೆರೆಯವರು ದೂರಿದ್ದಾರೆ.

ಸಹಾಯವಾಣಿ 181ಕ್ಕೆ ಬಂದ ದೂರಿನ ಮೇರೆಗೆ ದೆಹಲಿಯ ಮಹಿಳಾ ಆಯೋಗ ಇಲ್ಲಿನ ಪ್ರೇಮ್‌ ನಗರದಲ್ಲಿ ಮೂರು ವರ್ಷದ ಹುಡುಗಿಯನ್ನು ಶುಕ್ರವಾರ ರಕ್ಷಿಸಿದೆ.

ಪುಟಾಣಿಗೆ ಆಕೆಯ ತಂದೆ ಕಳೆದ ಮೂರು ದಿನಗಳಿಂದ ಹಾಲು, ಆಹಾರ ಏನನ್ನೂ ನೀಡಿಲ್ಲ ಎಂದು ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT