ಭಾನುವಾರ, ನವೆಂಬರ್ 17, 2019
23 °C

ಅಮೆರಿಕದಿಂದ ತೈಲ ಆಮದು, ಚರ್ಚೆ

Published:
Updated:

ನವದೆಹಲಿ: ಭಾರತವು ಅಮೆರಿಕದಿಂದ ನೈಸರ್ಗಿಕ ಅನಿಲ ಮತ್ತು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವ ಬಗ್ಗೆ ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಅಮೆರಿಕದ ಇಂಧನ ಸಚಿವಾಲಯದ ಉಪ ಸಹಾಯಕ ಕಾರ್ಯದರ್ಶಿ ಶಾನ್ ಬೆನ್ನೆತ್ ಅವರು ದೆಹಲಿಗೆ ಬಂದಿದ್ದ ವೇಳೆ, ಭಾರತದ ಇಂಧನ ಸಚಿವಾಲಯದ ಅಂತರರಾಷ್ಟ್ರೀಯ ಸಹಕಾರ ವಿಭಾಗದ ಜಂಟಿ ಕಾರ್ಯದರ್ಶಿ ಬಿ.ಎನ್‌.ರೆಡ್ಡಿ ಜತೆ ಈ ಮಾತುಕತೆ ನಡೆಸಿದ್ದಾರೆ.

ಅಮೆರಿಕದಿಂದ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರ ಸಾಧಕ–ಬಾಧಕಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ. ಅಲ್ಲದೆ ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಮಾತುಕತೆ ನಡೆದಿದೆ.

ಪ್ರತಿಕ್ರಿಯಿಸಿ (+)