ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಕರ್ತವ್ಯಕ್ಕೆ ಧೋನಿ ಹಾಜರ್‌

Last Updated 31 ಜುಲೈ 2019, 18:56 IST
ಅಕ್ಷರ ಗಾತ್ರ

ಶ್ರೀನಗರ: ಸೇನೆಯಿಂದ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಪದವಿಗೆ ಪಾತ್ರರಾಗಿರುವ ಮಾಜಿ ಕ್ರಿಕೆಟಿಗ ಮಹೇಂದ್ರಸಿಂಗ್‌ ಧೋನಿ ಸೇನಾಪಡೆ ಕರ್ತವ್ಯಕ್ಕೆ ಬುಧವಾರ ಹಾಜರಾದರು.

ದಕ್ಷಿಣ ಕಾಶ್ಮೀರದಲ್ಲಿ ಗಸ್ತು ತಿರುಗುವುದು ಸೇರಿದಂತೆ ಯೋಧರು ನಿರ್ವಹಿಸುವ ಕರ್ತವ್ಯಗಳಲ್ಲಿ ಧೋನಿ ತೊಡಗಿದ್ದಾರೆ. ‘ಅವರು 106 ಟಿಎ ಬಟಾಲಿಯನ್‌ನಲ್ಲಿ ಆಗಸ್ಟ್‌ 15ರ ವರೆಗೆ ಕರ್ತವ್ಯ ನಿರ್ವಹಿಸುವರು’ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

2011ರಲ್ಲಿ ಈ ಗೌರವ ಪದವಿಗೆ ಪಾತ್ರರಾಗಿರುವ ಧೋನಿ, ಪ್ಯಾರಾಚೂಟ್‌ ಜಂಪಿಂಗ್‌ಗೆ ಸಂಬಂಧಿಸಿದಂತೆ ಐದು ಬಾರಿ ತರಬೇತಿ ಪೂರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT