ಬುಧವಾರ, ಆಗಸ್ಟ್ 4, 2021
22 °C

ಕೋವಿಡ್-19| ಹುಟ್ಟಿದ ದಿನದಂದೇ ಡಿಎಂಕೆ ಶಾಸಕ ಜೆ ಅನ್ಬಳಗನ್ ವಿಧಿವಶ

ಇಟಿಬಿ ಶಿವಪ್ರಿಯನ್ Updated:

ಅಕ್ಷರ ಗಾತ್ರ : | |

MLA

 ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಆಪ್ತ, ಶಾಸಕ ಜೆ. ಅನ್ಬಳಗನ್ (62) ಕೋವಿಡ್-19ನಿಂದ ಸಾವಿಗೀಡಾಗಿದ್ದಾರೆ. ಕಳೆದ 8 ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚೇಪಕ್- ಟ್ರಿಪ್ಲಿಕೇನ್ ಶಾಸಕರಾಗಿದ್ದ ಅನ್ಬಳಗನ್ ಬುಧವಾರ ಬೆಳಗ್ಗೆ 8.05ಕ್ಕೆ ಡಾಕ್ಟರ್ ರೇಲಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೂನ್ 2ರಂದು ಆಸ್ಪತ್ರೆಗೆ ದಾಖಲಾದ ಇವರಿಗೆ ಕೊರೊನಾವೈರಸ್ ಸೋಂಕು ಇರುವುದಾಗಿ ದೃಢಪಟ್ಟಿತ್ತು.

ಹುಟ್ಟಿದ ದಿನದಂದೇ ಅನ್ಬಳಗನ್ ಸಾವಿಗೀಡಾಗಿದ್ದು, ಕೋವಿಡ್-19ನಿಂದಾಗಿ ತಮಿಳುನಾಡಿನಲ್ಲಿ ಮೃತಪಟ್ಟ ಮೊದಲ ಜನಪ್ರತಿನಿಧಿಯಾಗಿದ್ದಾರೆ.

ವೆಂಟಿಲೇಟರ್‌ನಲ್ಲಿದ್ದ ಅನ್ಬಳಕನ್ ಅವರ ಆರೋಗ್ಯ ಸ್ಥಿತಿ ಜೂನ್ 5ರಂದು ಅಲ್ಪ ಸುಧಾರಿಸಿದ್ದರೂ ಜೂನ್ 8ರಂದು ಗಂಭೀರವಾಗಿತ್ತು. 

ಡಿಎಂಕೆ ಪಕ್ಷದಲ್ಲಿನ ಹಿರಿಯ ನಾಯಕರ ಆಪ್ತರಾಗಿದ್ದಾರೆ ಅನ್ಬಳಕನ್. ಕರುಣಾನಿಧಿ ಅವರು 2011ರಲ್ಲಿ ಚೇಪಕ್ ಚುನಾವಣಾ ಕ್ಷೇತ್ರ ಬಿಟ್ಟು ತಿರುವನೂರ್ ಚುನಾವಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ, ಚೇಪಕ್‌ ಕ್ಷೇತ್ರದ ಪ್ರತಿನಿಧಿಯಾಗಿ ಕರುಣಾನಿಧಿಯವರೇ ಅನ್ಬಳಕನ್ ಅವರನ್ನು ಆಯ್ಕೆ ಮಾಡಿದ್ದರು.
 2001ರಲ್ಲಿ ಟಿ ನಗರ್ ಚುನಾವಣಾ ಕ್ಷೇತ್ರದಲ್ಲಿ ಗೆದ್ದ ಅನ್ಬಳಕನ್, 2006ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 2011 ಮತ್ತು  2016ರಲ್ಲಿ ಚೇಪಕ್- ಟ್ರಿಪ್ಲಿಕೇನ್ ಚುನಾವಣಾ ಕ್ಷೇತ್ರದಲ್ಲಿ ಇವರು ಗೆದ್ದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು