ಬೆದರಿಕೆ ಎದುರಿಸಲು ಸಿದ್ಧ: ಸ್ಟಾಲಿನ್‌

7
ಉತ್ತರಾಧಿಕಾರ ಸಮರ: ಕಾರ್ಯಕರ್ತರಿಗೆ ಪತ್ರ

ಬೆದರಿಕೆ ಎದುರಿಸಲು ಸಿದ್ಧ: ಸ್ಟಾಲಿನ್‌

Published:
Updated:

ಚೆನ್ನೈ: ತಮ್ಮ ತಂದೆ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ನಿಧನಾನಂತರ ಸಹೋದರ ಎಂ.ಕೆ. ಅಳಗಿರಿ ಅವರಿಂದ ಉದ್ಭವಿಸಿರುವ ಉತ್ತರಾಧಿಕಾರದ ಬಿಕ್ಕಟ್ಟಿಗೆ, ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಯಾರಿಗೂ ನಾನು ಬೆದರುವುದಿಲ್ಲ. ಪಕ್ಷದ ಒಳಗೆ ಮತ್ತು ಹೊರಗಿನಿಂದ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಬಲ್ಲೆ’ ಎಂದು ಹೇಳಿದ್ದಾರೆ.

ತಮ್ಮ ಈ ಅಭಿಪ್ರಾಯವನ್ನು ಸ್ಟಾಲಿನ್‌ ಪಕ್ಷದ ಕಾರ್ಯಕರ್ತರಿಗೆ ಪತ್ರದ ಮೂಲಕ ವಿವರಿಸಿದ್ದಾರೆ.

‘ಈ ಬಿಕ್ಕಟ್ಟಿನ ಬಗ್ಗೆ ತಂದೆ (ಕಲೈನಾರ್‌) ಇದ್ದಾಗಲೇ ನಾನು ಪ್ರಸ್ತಾಪ ಮಾಡಿದ್ದೆ. ಕಲೈನಾರ್‌ ಅವರ ಪ್ರೀತಿಯ ಬೆಂಬಲಿಗರಿಂದ ಎಲ್ಲವನ್ನೂ ಜಯಿಸುತ್ತೇನೆ’ ಎಂದು ಹೇಳಿದ್ದಾರೆ.

ಅನಗತ್ಯ ಚರ್ಚೆ: ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಸ್ಥಳ ನೀಡುವ ಸಂಬಂಧ ಸೃಷ್ಟಿಯಾಗಿದ್ದ ವಿವಾದ ಈಗಾಗಲೇ ಕೊನೆಯಾಗಿದೆ; ಯಾರೂ ಈ ಬಗ್ಗೆ ಅನಗತ್ಯ ಚರ್ಚೆ ನಡೆಸುವುದು ಸಲ್ಲದು ಎಂದು ಉಪಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಬುಧವಾರ ಹೇಳಿದ್ದಾರೆ.

ಕರುಣಾನಿಧಿ ಅವರ ಆಶಯದಂತೆ ಅವರ ಅಂತ್ಯಸಂಸ್ಕಾರಕ್ಕೆ ಮರೀನಾ ಕಡಲತೀರದಲ್ಲಿ ಸ್ಥಳ ನೀಡಲು ಎಐಎಡಿಎಂಕೆ ನೇತೃತ್ವದ ಸರ್ಕಾರ ನಿರಾಕರಿಸಿತ್ತು. ಇದರ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದ ಡಿಎಂಕೆ ಪರವಾಗಿ ತೀರ್ಪು ಪ್ರಕಟವಾಗಿತ್ತು.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !