ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO| ವಿಮಾನದಲ್ಲೇ ವೃದ್ಧ ಅಸ್ವಸ್ಥ: ಬಾಯಿಂದಲೇ ಮೂತ್ರ ಎಳೆದು ಜೀವ ಉಳಿಸಿದ ವೈದ್ಯ

Last Updated 22 ನವೆಂಬರ್ 2019, 15:46 IST
ಅಕ್ಷರ ಗಾತ್ರ

ಬೀಜಿಂಗ್‌ (ಚೀನಾ): ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ಅಸ್ವಸ್ಥರಾದ ವೃದ್ಧರೊಬ್ಬರ ಮೂತ್ರಕೋಶದಲ್ಲಿದ್ದ ಬರೋಬ್ಬರಿ ಒಂದು ಲೀಟರ್‌ ಮೂತ್ರವನ್ನು ಸಹಪ್ರಯಾಣಿಕ, ಚೀನಾದ ವೈದ್ಯರೊಬ್ಬರು ತಮ್ಮ ಬಾಯಿಯ ಮೂಲಕವೇ ಹೊರ ತೆಗೆದು ಜೀವ ಉಳಿಸಿದ್ದಾರೆ. ಈ ಮೂಲಕ ಅವರು ಜಗತ್ತಿನಾದ್ಯಂತ ಹೀರೋ ಎನಿಸಿಕೊಂಡಿದ್ದಾರೆ.

ಚೀನಾದ ಗೌಂಗ್ಸೋವ್‌ ಮತ್ತು ನ್ಯೂಯಾರ್ಕ್‌ ನಡುವಿನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರು ಪ್ರಯಾಣದ ವೇಳೆ ದಿಢೀರ್‌ ಅಸ್ವಸ್ಥರಾದರು. ಕೈಕಾಲು ತಣ್ಣಗಾಗಿ, ಬೆವರುತ್ತಿದ್ದ ಅವರು ಮೂತ್ರ ವಿಸರ್ಜನೆ ಮಾಡಲಾಗುತ್ತಿಲ್ಲ ಎಂದು ವಿಮಾನದ ಸಿಬ್ಬಂದಿಗೆ ತಿಳಿಸಿದ್ದಾರೆ.

ಅದರಂತೆ ಅವರಿಗೆ ತಾತ್ಕಾಲಿಕವಾಗಿ ಮಲಗಲು ವ್ಯವಸ್ಥೆ ಮಾಡಿದ ವಿಮಾನ ಸಿಬ್ಬಂದಿ, ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ ಎಂದು ವಿಮಾನದ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆಗ ಮುಂದೆ ಬಂದ ಚೀನಾದ ನಾಳ ಶಸ್ತ್ರಚಿಕಿತ್ಸಾ ತಜ್ಞ ಡಾ. ಜಾಂಗ್‌ ಅಸ್ವಸ್ಥರಾಗಿದ್ದ ವೃದ್ಧರನ್ನು ಪರೀಕ್ಷಿಸಿದ್ದಾರೆ. ಅವರ ಮೂತ್ರ ಕೋಶವು ಸಂಪೂರ್ಣ ತುಂಬಿರುವುದು ಈ ವೇಳೆ ಗೊತ್ತಾಗಿದೆ. ಮೂತ್ರ ವಿಸರ್ಜನೆಯಾಗದೇ ಹೋದರೆ ಮೂತ್ರಕೋಶ ಮತ್ತು ನಾಳಗಳು ಸಿಡಿದು ಪ್ರಾಣಕ್ಕೆ ಎರವಾಗಬಹುದು ಎಂಬುದನ್ನು ಅರಿತ ವೈದ್ಯ ಜಾಂಗ್‌, ವಿಮಾನದಲ್ಲೇ ಲಭ್ಯವಾದ ಸಲಕರಣೆಗಳನ್ನು ಉಪಯೋಗಿಸಿಕೊಂಡು ಮೂತ್ರ ಹೊರ ತೆಗೆಯಲು ಪ್ರಯತ್ನಿಸಿದರಾದರೂ ಅದು ಫಲಕಾರಿಯಾಗಿಲ್ಲ.

ಸಿರಿಂಜ್‌ ಮೂಲಕ ಹೊರಗೆ ತೆಗೆಯಲು ಯತ್ನಿಸಿ ವಿಫಲರಾದಾಗ ತಮ್ಮ ಬಾಯಿಯ ಮೂಲಕವೇ ವೃದ್ಧರ ಮೂತ್ರಕೋಶದಲ್ಲಿದ್ದ ಮೂತ್ರವನ್ನು ಹೊರ ತೆಗೆದಿದ್ದಾರೆ. ಸುಮಾರು 700–800 ಮಿಲಿ ಲೀಟರ್‌ ಗಳಷ್ಟು ಮೂತ್ರವನ್ನುಅವರು ಬಾಯಿಯ ಮೂಲಕವೇ ತೆಗೆದಿದ್ದಾರೆ. ಈ ಕಾರ್ಯ ಪೂರ್ಣಗೊಳಿಸಲು ಅವರು ಸರಿ ಸುಮಾರು 37 ನಿಮಿಷಗಳಷ್ಟು ಸಮಯ ತೆಗೆದುಕೊಂಡಿದ್ದರು.

ವಿಮಾನ ಭೂಸ್ಪರ್ಷ ಮಾಡಿದ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಗಿಯ ಜೀವ ಉಳಿಸಲು ವೈದ್ಯ ಜಾಂಗ್‌ ಅವರು ತೋರಿದ ವೃತ್ತಿ ಬದ್ಧತೆಯ ವಿಡಿಯೋ ಸದ್ಯ ಜಗತ್ತಿನಾದ್ಯಂತ ವೈರಲ್‌ ಆಗಿದೆ. ಅವರ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT