ನವದೆಹಲಿ: ಭಾರತದ ಒಳಪ್ರವೇಶಿಸುವ ಯಾವುದೇ ಅಪರಿಚಿತಡ್ರೋನ್‌ಗಳನ್ನು ಹೊಡೆದುರುಳಿಸುವ ಆಂಟಿ ಡ್ರೋನ್ ಸಾಧನವನ್ನು ಡಿಆರ್ ಡಿಓ ಅಭಿವೃದ್ಧಿಪಡಿಸಿದೆ.

ಇದನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ನೀಡುವ ಸಂದರ್ಭ ಅವರ ರಕ್ಷಣೆಗಾಗಿ ಭಾರತೀಯ ಸೇನೆ ಬಳಸಲಿದೆ.
ಈಗಾಗಲೇ ಭಾರತೀಯ ವಾಯು ಸೇನೆ, ಭೂಸೇನೆ, ನೌಕಾದಳ, ಅರೆಸೇನಾ ತುಕಡಿಗಳನ್ನು ಟ್ರಂಪ್ ಭದ್ರತೆಗಾಗಿ ನಿಯೋಜಿಸಲಾಗಿದೆ.

ಭೇಟಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲು ಹಾಗೂ ಅಪರಿಚಿತ ಡ್ರೋನ್‌ಗಳ ಮೇಲೆ ನಿಗಾ ವಹಿಸಲು ಡಿಆರ್ ಡಿಓದಲ್ಲಿರುವಈ ಸಾಧನವನ್ನು ಭದ್ರತೆಗೆ ಅಳವಡಿಸಲಾಗಿದೆ.

ಈ ಸಾಧನಆಕಾಶದಲ್ಲಿ ಹಾರಾಡುವ ಡ್ರೋನ್‌ಗಳನ್ನೂ ಪತ್ತೆ ಹಚ್ಚುವುದಲ್ಲದೆ,ನಾಶಗೊಳಿಸಬಲ್ಲದು ಎಂದು ಅಧಿಕಾರಿಗಳು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಟ್ರಂಪ್ ಭಾರತ ಭೇಟಿ ಹಿನ್ನೆಲೆ: ಅಹಮದಾಬಾದ್ನ ಸ್ಲಂ ಕಾಣಿಸದಂತೆ ಗೋಡೆ ನಿರ್ಮಾಣ

ಈ ಸಾಧನವನ್ನು ಕಳೆದಜನವರಿಯಲ್ಲಿ ನಡೆದ ಗಣರಾಜ್ಯೋತ್ಸವದ ಸಮಯದಲ್ಲಿ ಬಳಸಲಾಗಿತ್ತು.
ಅಲ್ಲದೆ, ಅಹಮದಾಬಾದ್‌ನಲ್ಲಿ ನಡೆದ ಮೋದಿ ಹಾಗೂ ಅಮಿತ್ ಶಾ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಬಳಸಲಾಗಿತ್ತು. ಇದಲ್ಲದೆ, ಜಮ್ಮು ಕಾಶ್ಮೀರ ಗಡಿಯಲ್ಲಿಉಗ್ರರು ಶಸ್ತ್ರಾಸ್ತ್ರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಸಣ್ಣ ಪ್ರಮಾಣದ ಡ್ರೋನ್‌ಬಳಸುತ್ತಿರುವುದನ್ನು ಬಿಎಸ್‌ಎಫ್ ಪತ್ತೆ ಹಚ್ಚಿದೆ. ಇಂತಹ ಡ್ರೋನ್‌ಗಳನ್ನು ಪತ್ತೆ ಹಚ್ಚಿ ನಾಶ ಪಡಿಸಲು ಈ ಸಾಧನವನ್ನು ಬಳಸಬಹುದಾಗಿದೆ ಎಂದು ಡಿಆರ್ ಡಿಓ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.