ಮಂಗಳವಾರ, ನವೆಂಬರ್ 19, 2019
22 °C

ಮಹಿಳಾ ತಹಶೀಲ್ದಾರ್‌ಗೆ ಬೆಂಕಿ ಹಚ್ಚಿ ಹತ್ಯೆ: ರಕ್ಷಣೆಗೆ ಧಾವಿಸಿದ್ದ ಚಾಲಕ ಸಾವು

Published:
Updated:
Prajavani

ಹೈದರಾಬಾದ್‌: ತಹಶೀಲ್ದಾರ್‌ಗೆ ಕಚೇರಿಯಲ್ಲಿಯೇ ಬೆಂಕಿ ಹಚ್ಚಿದ್ದಾಗ ಅವರ ರಕ್ಷಣೆಗೆ ಧಾವಿಸಿ ತೀವ್ರ ಸುಟ್ಟಗಾಯಗಳಾಗಿದ್ದ  ಚಾಲಕ ಗುರುನಾಥಂ ಮಂಗಳವಾರ ಮೃತಪಟ್ಟಿದ್ದಾರೆ. 

ಸುರೇಶ್‌ ಎಂಬಾತ ಸೋಮವಾರ ಇಲ್ಲಿನ ಅಬ್ದುಲ್ಲಾಪುರಮೆಟ್‌ನ ತಹಶೀಲ್ದಾರ್ ವಿಜಯಾರೆಡ್ಡಿ ಅವರಿಗೆ ಕಚೇರಿಯಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ವಿಜಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: ತೆಲಂಗಾಣ ‌| ಮಹಿಳಾ ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹತ್ಯೆ

ಗುರುನಾಥಂ ಕಳೆದ ಆರು ವರ್ಷಗಳಿಂದಲೂ ತಹಶೀಲ್ದಾರ್ ಅವರ ಕಾರುಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೂರ್ಯಪೇಟ್‌ ಜಿಲ್ಲೆಯ ವೆಲಿದಂಡ ಗ್ರಾಮದ ನಿವಾಸಿಯಾಗಿರುವ ಇವರಿಗೆ ಪುತ್ರ, ಗರ್ಭಿಣಿ ಪತ್ನಿ ಇದ್ದಾರೆ.

ಆರೋಪಿ: ಇತ್ತ, ಆರೋಪಿ ಸುರೇಶ್‌ಗೆ ಶೇ 65ರಷ್ಟು ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾಕಷ್ಟು ಅಲೆದಾಡಿದ್ದರೂ ಭೂ ಮಾಲೀಕತ್ವ ದಾಖಲೆ ಒದಗಿಸಲು ವಿಳಂಬ ಮಾಡಿದ್ದರು. ಕಡೆಯದಾಗಿ ಅಧಿಕಾರಿಗೆ ಮನವಿ ಮಾಡಿದ್ದೆ. ಅವರೂ ತಿರಸ್ಕರಿಸಿದಾಗ ಕೃತ್ಯ ಎಸಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

 

ಪ್ರತಿಕ್ರಿಯಿಸಿ (+)