ಗುರುವಾರ , ಫೆಬ್ರವರಿ 25, 2021
24 °C
'ಅಮೆರಿಕ ಚುನಾವಣೆಯಲ್ಲಿ ಭಾರತ ತಟಸ್ಥ'

ಅಬ್‌ಕಿ ಬಾರ್... ತಪ್ಪು ಗ್ರಹಿಕೆ ಬೇಡ: ವಿದೇಶಾಂಗ ಸಚಿವ ಜೈಶಂಕರ್ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ ಚುನಾವಣಾ ರಾಜಕೀಯ ವಿಚಾರದಲ್ಲಿ  ಭಾರತ ತಟಸ್ಥ ನಿಲುವು ಹೊಂದಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರು ಸ್ಪಷ್ಟಪಡಿಸಿದ್ದಾರೆ. 

ಇತ್ತೀಚೆಗೆ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಅಬ್‌ಕಿ ಬಾರ್ ಟ್ರಂಪ್ ಸರ್ಕಾರ್’ (ಈ ಬಾರಿ ಟ್ರಂಪ್ ಸರ್ಕಾರ) ಎಂಬ ಘೋಷಣೆ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.

‘2016ರಲ್ಲಿ ಅಮೆರಿಕ ಚುನಾವಣೆಯ ವೇಳೆ ಟ್ರಂಪ್ ಅವರ ಬೆಂಬಲಿಗರು ಈ ಘೋಷಣೆ ಕೂಗಿದ್ದರು ಎಂಬುದನ್ನು ಮೋದಿ ಅವರು ಸಾಂದರ್ಭಿಕವಾಗಿ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. 2020ರ ಚುನಾವಣೆಗೆ ಮರು ಆಯ್ಕೆ ಬಯಸಿರುವ ಟ್ರಂಪ್ ಅವರ ಪರ ಪ್ರಚಾರಕ್ಕಾಗಿ ಪ್ರಧಾನಿ ಈ ಘೋಷಣೆಯನ್ನು ಬಳಸಿಕೊಂಡಿಲ್ಲ’ ಎಂದು ವಿವರಿಸಿದ್ದಾರೆ. 

ಸುದ್ದಿಗಾರರ ಜೊತೆ ಮಾತನಾಡಿದ ಜೈಶಂಕರ್, ‘ಪ್ರಧಾನಿ ಅಂದು ಹೇಳಿದ ಮಾತನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿ. ಅವರು ಮಾತನಾಡಿದ್ದು ಹಿಂದಿನ ಚುನಾವಣೆಯ ವಿಚಾರವನ್ನು. ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು’ ಎಂದು ಹೇಳಿದರು. 

ಮೋದಿ ಅವರು ಟ್ರಂಪ್ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು. ಇದನ್ನು ಬಿಜೆಪಿ ಅಲ್ಲಗಳೆದಿತ್ತು. 

ಅಮೆರಿಕದ ನಿರ್ಬಂಧದ ಬೆದರಿಕೆ ಹೊರತಾಗಿಯೂ, ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ಭಾರತದ ನಿರ್ಧಾರವನ್ನು ಜೈಶಂಕರ್ ಸಮರ್ಥಿಸಿಕೊಂಡಿದ್ದಾರೆ. 

* ಪ್ರಧಾನಿಯವರ ಅಸಾಮರ್ಥ್ಯ ಮುಚ್ಚಿ ಹಾಕುತ್ತಿರುವುದಕ್ಕೆ ಜೈಶಂಕರ್‌ಗೆ ಧನ್ಯವಾದ. ಮೋದಿ ಅವರಿಗೆ ರಾಜತಾಂತ್ರಿಕತೆ ಬಗ್ಗೆ ತಿಳಿಸಿಕೊಡಿ

–ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು