ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಪ್‌ ಇನ್‌ ಇಂಡಿಯಾ’ ಹೇಳಿಕೆ ಬಗ್ಗೆ ವರದಿ ಕೇಳಿದ ಚುನಾವಣೆ ಆಯೋಗ

Last Updated 16 ಡಿಸೆಂಬರ್ 2019, 14:16 IST
ಅಕ್ಷರ ಗಾತ್ರ

ನವದೆಹಲಿ: ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ‘ರೇಪ್‌ ಇನ್ ಇಂಡಿಯಾ‌’ ಹೇಳಿಕೆ ಕುರಿತು ವಾಸ್ತವ ವರದಿ ಸಲ್ಲಿಸಬೇಕು’ ಎಂದು ಚುನಾವಣಾ ಆಯೋಗವು ಜಾರ್ಖಂಡ್‌ನಲ್ಲಿನ ಚುನಾವಣಾ ಅಧಿಕಾರಿಗಳಿಗೆ ಕೋರಿದೆ.

ರಾಜಕೀಯ ವೈರಿಗಳನ್ನು ಗುರಿಯಾಗಿಸಿ ಟೀಕಿಸಲು ರಾಹುಲ್‌ ಗಾಂಧಿ ಅವರು ರೇಪ್‌ ಪ್ರಕರಣಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ದೂರು ಆಧರಿಸಿ ಆಯೋಗ ಈ ಕುರಿತು ವರದಿಯನ್ನು ಕೇಳಿದೆ.

ವರದಿ ತಲುಪಿದ ನಂತರ ಆಯೋಗ ಮುಂದಿನ ಕ್ರಮವಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಜಾರ್ಖಂಡ್‌ನ ಗೊಡ್ಡಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಲು ರಾಹುಲ್‌ ಈ ಮಾತು ಬಳಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT