ನಿಗದಿತ ಸಮಯಕ್ಕೆ ಲೋಕಸಭಾ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ

ಬುಧವಾರ, ಮಾರ್ಚ್ 20, 2019
26 °C

ನಿಗದಿತ ಸಮಯಕ್ಕೆ ಲೋಕಸಭಾ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ

Published:
Updated:

ನವದೆಹಲಿ: ನಿಗದಿತ ಸಮಯಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್  ಅರೋರಾ ಶುಕ್ರವಾರ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಲೋಕಸಭಾ ಚುನಾವಣೆ ಮೇಲೆ ಇದು ಪ್ರಭಾವ ಬೀರಲಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರೋರಾ ಲೋಕಸಭಾ ಚುನಾವಣೆ ನಿಗದಿತ ಸಮಯದಲ್ಲಿಯೇ ನಡೆಯಲಿದೆ ಎಂದಿದ್ದಾರೆ.

ಚುನಾವಣಾ ಸಿದ್ಧತೆಗಳ ಬಗ್ಗೆ ಅವಲೋಕನ ನಡೆಸುವುದಕ್ಕಾಗಿ ಅರೋರಾ ಲಖನೌ‍ನಲ್ಲಿದ್ದಾರೆ.

ಚುನಾವಣಾ ಆಯೋಗದ ಹೊಸ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ದೇಶದಲ್ಲಿರುವ ಆಸ್ತಿ ವಿವರ ಮಾತ್ರವಲ್ಲದೆ ವಿದೇಶದಲ್ಲಿರುವ ಆಸ್ತಿ ವಿವರಗಳನ್ನೂ ಸಲ್ಲಿಸಬೇಕು ಎಂದು ಅರೋರಾ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 25

  Happy
 • 2

  Amused
 • 4

  Sad
 • 3

  Frustrated
 • 4

  Angry

Comments:

0 comments

Write the first review for this !