2019ರ ಲೋಕಸಭೆ ಜತೆಗೆ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಬಹುದು: ಅಮಿತ್ ಶಾ

7

2019ರ ಲೋಕಸಭೆ ಜತೆಗೆ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಬಹುದು: ಅಮಿತ್ ಶಾ

Published:
Updated:

ಹೈದರಾಬಾದ್‌:  ಬಹುಶ 2019ರ ಲೋಕಸಭೆ ಚುನಾವಣೆ ಜತೆಯಲ್ಲೇ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಬಹುದು, ಒಟ್ಟಿಗೆ  ಚುನಾವಣೆ ನಡೆದರೆ ಚುನಾವಣಾ ವೆಚ್ಚವನ್ನು ಉಳಿತಾಯ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಅಮಿತ್ ಶಾ ಶನಿವಾರ ಹೇಳಿದರು. 

ಮೆಹಬೂಬ್‌ ನಗರದಲ್ಲಿ ಆಯೋಜಿಸಿದ್ದ ಬಿಜೆಪಿಯ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿ ಅಮಿತ್ ಶಾ ಮಾತನಾಡಿದರು. 

ನಾನು ಕೆ.ಚಂದ್ರಶೇಖರ ರಾವ್ ಅವರನ್ನು ಕೇಳುತ್ತೇನೆ, ಯಾಕೆ, ವಿಧಾನಸಭೆಯನ್ನು ಬೇಗ ವಿಸರ್ಜಿಸಿದಿರಿ? ನಿಮಗೆ ಮೇ ತಿಂಗಳಲ್ಲಿ  ಗೆಲ್ಲುವ ವಿಶ್ವಾಸವಿರಲಿಲ್ಲವೇ? ನವೆಂಬರ್ ಮತ್ತು ಡಿಸೆಂಬರ್‌ ತಿಂಗಳಲ್ಲಿ ಮಾತ್ರ ಸರ್ಕಾರ ರಚಿಸಲು ಸಾಧ್ಯವೆ ಎಂದು ಚಂದ್ರಶೇಖರ್ ರಾವ್‌ ಅವರನ್ನು ಅಮಿತ್‌ ಶಾ ತರಾಟೆಗೆ ತೆಗೆದುಕೊಂಡರು. 

ತೆಲಂಗಾಣದಲ್ಲಿ ರಾಹುಲ್‌ ಗಾಂಧಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ, ಮಾಜಿ ಪ್ರಧಾನಿ ನರಸಿಂಹ ರಾವ್ ಅವರನ್ನು ಹೇಗೆ ಅವಮಾನಿಸಿದರೂ ಎಂಬುದನ್ನು ತೆಲಂಗಾಣ ಜನರ ಮರೆತಿಲ್ಲ ಎಂದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !