ಬುಧವಾರ, ಜನವರಿ 22, 2020
18 °C

ಪಶುವೈದ್ಯೆ ಅತ್ಯಾಚಾರ ಪ್ರಕರಣದ ಎನ್‌ಕೌಂಟರ್: ಆರೋಪಿಗಳ ಮನೆಯಲ್ಲಿ ಆಘಾತ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಅತ್ಯಾಚಾರ ಆರೋಪಿಗಳು ಎನ್‌ಕೌಂಟರ್‌ನಲ್ಲಿ ಹತರಾಗಿರುವ ಸುದ್ದಿಗೆ, ಅವರ ಕುಟುಂಬದವರು ಆಘಾತ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಆರಿಫ್‌ನ ತಾಯಿ ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ. ‘ನನ್ನ ಮಗ ತಪ್ಪು ಮಾಡಿದ್ದವನೇ ಆಗಿದ್ದರೆ, ಅವನಿಗೆ ಕಠಿಣ ಶಿಕ್ಷೆಯಾಗಲೇಬೇಕು’ ಎಂದು ಆರಿಫ್‌ನ ತಂದೆ ಈ ಹಿಂದೆಯೇ ಹೇಳಿದ್ದರು.

ಉಳಿದ ಮೂವರು ಆರೋಪಿಗಳ ಕುಟುಂಬದವರು ಆಕ್ರಂದನ ಮುಗಿಲುಮುಟ್ಟಿದೆ. ಆರಿಫ್‌ನ ಕುಟುಂಬದವರನ್ನು ಹೊರತುಪಡಿಸಿ ಉಳಿದ ಆರೋಪಿಗಳ ಮನೆಯವರು, ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಬಾರದಾಗಿತ್ತು ಎಂದು ಹೇಳಿದ್ದಾರೆ.

ನಾಲ್ವರು ಆರೋಪಿಗಳ ಕುಟುಂಬಗಳು ತೀರಾ ಬಡತನದಿಂದ ಕೂಡಿವೆ. ಅರೋಪಿಗಳು ಅನಕ್ಷರಸ್ಥರಾಗಿದ್ದರು. ಆದರೆ ಚೆನ್ನಾಗಿ ದುಡಿಯುತ್ತಿದ್ದರು. ದುಡಿದಿದ್ದನ್ನು ಕುಡಿತಕ್ಕೆ ಬಳಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು