ಸೋಮವಾರ, ಫೆಬ್ರವರಿ 24, 2020
19 °C

ಲಖನೌ ಕೋರ್ಟ್‌ ಆವರಣದಲ್ಲಿ 3 ಬಾಂಬ್ ಸ್ಫೋಟ, ವಕೀಲರಿಗೆ ಗಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ನ್ಯಾಯಾಲಯ ಆವರಣದಲ್ಲಿ ಕಚ್ಚಾಬಾಂಬ್ ಸ್ಫೋಟಗೊಂಡ ಕಾರಣ ಇಬ್ಬರು ವಕೀಲರು ಗಾಯಗೊಂಡಿದ್ದಾರೆ. ಲಖನೌ ವಕೀಲರ ಸಂಘದ ಹಿರಿಯ ಸದಸ್ಯರೊಬ್ಬರನ್ನು ಗುರಿಯಾಗಿಸಿ ಬಾಂಬ್ ಎಸೆಯಲಾಯಿತು ಎಂದು ಮೂಲಗಳು ಹೇಳಿವೆ.

ಸ್ಫೋಟ ಸಂಭವಿಸಿದ ಸ್ಥಳವು ಲಖನೌದ ಹಝರತ್‌ಗಂಜ್‌ನ ಜಿಲ್ಲಾಧಿಕಾರಿ ಕಚೇರಿ ಸಮೀಪವಿದೆ. ಇಲ್ಲಿಂದ ಉತ್ತರ ಪ್ರದೇಶ ವಿಧಾನಸಭೆ ಕೇವಲ 2 ಕಿ.ಮೀ. ದೂರವಿದೆ. ಸ್ಫೋಟದ ನಂತರ ಸ್ಥಳದಲ್ಲಿ ಮೂರು ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನನ್ನನ್ನೇ ಗುರಿಯಾಗಿಸಿ ಬಾಂಬ್ ಎಸೆಯಲಾಯಿತು. ಘಟನೆಯ ಹಿಂದೆ ಮತ್ತೋರ್ವ ವಕೀಲ ಜಿತು ಯಾದವ್ ಕೈವಾಡವಿದೆ ಎಂದು ಲಖನೌ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಸಂಜೀವ್ ಲೋಧಿ ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು