ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ದಾಳಿ ಬಾಂಬರ್‌ಗೆ ಸಹಾಯ ಮಾಡಿದ ಅಪ್ಪ- ಮಗಳ ಬಂಧನ 

Last Updated 3 ಮಾರ್ಚ್ 2020, 13:16 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಪಡೆಗಳ ದಾಳಿ ನಡೆಸಿದ ಬಾಂಬರ್‌ಗಳಿಗೆಸಹಾಯ ಮಾಡಿದ್ದಜಮ್ಮು ಕಾಶ್ಮೀರದ ಪುಲ್ವಾಮಾದ ಇಬ್ಬರು ನಿವಾಸಿಗಳನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಮಂಗಳವಾರ ಬಂಧಿಸಿದೆ.

ಪುಲ್ವಾಮಾ ದಾಳಿ ನಡೆಸಿದ್ದ ಬಾಂಬರ್ ಅದಿಲ್ ಅಹಮ್ಮದ್ ಧಾರ್, ಶಕೀರ್ ಮಾರ್ಗೆ ಮತ್ತು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಹಿರಿಯ ಕಮಾಂಡರ್‌ಗಳಿಗೆ ಪುಲ್ವಾಮಾ ನಿವಾಸಿಗಳಾದ ತಾರೀಕ್ ಅಹಮದ್ ಶಾ (50) ಮತ್ತು ಆತನ ಪುತ್ರಿ 23ರ ಹರೆಯದ ಇನ್ಶಾ ಜಾನ್ ಸಹಾಯ ಮಾಡಿದ್ದರು ಎಂದು ಎನ್‌ಐಎ ಹೇಳಿದೆ.

ಬಾಂಬ್ ದಾಳಿ ನಡೆಸಲು ಉಗ್ರರು ಶಾ ಅವರ ಮನೆಯಲ್ಲಿಯೇ ಕಾರ್ಯತಂತ್ರ ರೂಪಿಸಿದ್ದರು ಎಂದು ಎನ್‌ಐಎ ಹೇಳಿದೆ. ಜೈಷ್ ಇ ಮೊಹಮ್ಮದ್ ಸಂಘಟನೆ ಬಿಡುಗಡೆ ಮಾಡಿರುವ ವಿಡಿಯೊ ಅಹಮದ್ ಶಾ ಮನೆಯಲ್ಲಿಯೇ ಚಿತ್ರೀಕರಿಸಲಾಗಿತ್ತು.

ಬಾಂಬರ್ ಅದಿಲ್ ಧಾರ್‌ಗೆ ಇರಲುಮನೆ ಮತ್ತು ಇನ್ನಿತರ ಸಹಾಯಗಳನ್ನು ಮಾಡಿದ್ದಮಾರ್ಗೆಯನ್ನು ಎನ್ಐಎ ಕಳೆದ ವಾರ ಬಂಧಿಸಿತ್ತು,

ಆತ್ಮಾಹುತಿ ದಾಳಿ ನಡೆದ ದಿನದಂದು ಮಾರ್ಗೆ ಕಾರು ಚಲಾಯಿಸಿದ್ದು, ದಾಳಿ ಸ್ಥಳದಿಂದ 500 ಮೀಟರ್ ದೂರದಲ್ಲಿ ವಾಹನದಿಂದ ಇಳಿದು ಹೋಗಿದ್ದರು. ಅವರು ಯಾವ ರೀತಿ ದಾಳಿ ಸಂಚು ಮತ್ತು ಅದರ ನಿರ್ವಹಣೆ ಮಾಡಿದ್ದರು ಎಂಬುದು ಇದರಲ್ಲಿ ಸ್ಪಷ್ಟವಾಗುತ್ತಿದೆ ಎಂದು ಎನ್‌ಐಎ ತಂಡದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:ಪುಲ್ವಾಮ ದಾಳಿ: ಗುಪ್ತಚರ ವೈಫಲ್ಯದ ವಿವರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT