ಗುರುವಾರ , ಜುಲೈ 16, 2020
24 °C

ಸಾರಿಗೆ: ವಿಳಂಬ ಪಾವತಿಗೆ ದಂಡವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಾಹನಗಳ ರಹದಾರಿ, ಅರ್ಹತಾ ಪ್ರಮಾಣ ಪತ್ರ, ಚಾಲನಾ ಪರವಾನಗಿ ಸೇರಿದಂತೆ ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳಿಗೆ ಫೆಬ್ರುವರಿ 1ರ ನಂತರ ಪಾವತಿ ಮಾಡಿರುವ ಶುಲ್ಕವು ಜುಲೈ 31ರವರೆಗೆ ಮಾನ್ಯತೆ ಹೊಂದಿರುತ್ತವೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಹೇಳಿದೆ.

ವಾಹನಗಳ ಫಿಟ್‌ನೆಸ್ ಪರೀಕ್ಷೆ, ಚಾಲನಾ ತರಬೇತಿ ಪರೀಕ್ಷೆ, ಚಾಲನಾ ಪರೀಕ್ಷೆ ಸೇರಿ ಹಲವು ಸೇವೆಗಳಿಗೆ ಮುಂಚಿತವಾಗಿಯೇ ಶುಲ್ಕ ಪಾವತಿ ಮಾಡಲಾಗುತ್ತದೆ. ಶುಲ್ಕ ಪಾವತಿ ಮಾಡಿದ ನಂತರದ ನಿಗದಿತ ಅವಧಿಯೊಳಗೆ ಆ ಸೇವೆಯನ್ನು ಪಡೆದುಕೊಳ್ಳಬೇಕು. ಇಂತಹ ಹಲವು ಸೇವೆಗಳ ಶುಲ್ಕ ರಸೀದಿಯ ಮಾನ್ಯತೆ ಅವಧಿ ಮೂರು ತಿಂಗಳು ಮಾತ್ರ. ಕೆಲವು ಸೇವೆಗಳ ಅವಧಿ 1 ತಿಂಗಳು ಮಾತ್ರ. ಲಾಕ್‌ಡೌನ್ ಜಾರಿಯಾದ ಕಾರಣ ಸಾರಿಗೆ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಫೆಬ್ರುವರಿ 1ರ ನಂತರ ಪಾವತಿ ಮಾಡಿರುವ ಶುಲ್ಕದ ಮಾನ್ಯತೆಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.

ಫೆಬ್ರುವರಿ 1ರ ನಂತರ ಪಾವತಿ ಮಾಡಬೇಕಿದ್ದ, ಆದರೆ ಲಾಕ್‌ಡೌನ್‌ನ ಕಾರಣ ಪಾವತಿ ಮಾಡಲು ಸಾಧ್ಯವಾಗದೇ ಇದ್ದ ಸೇವೆಗಳ ಶುಲ್ಕಕ್ಕೆ ದಂಡ ವಿಧಿಸವುದಿಲ್ಲ. ವಿಳಂಬ ಪಾವತಿ ಶುಲ್ಕವನ್ನೂ ವಿಧಿಸುವುದಿಲ್ಲ. ಜುಲೈ 31ರವರೆಗೆ ಇದು ಅನ್ವಯವಾಗುತ್ತದೆ ಎಂದು ಸಚಿವಾಲಯವು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು