ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ನಾನ್‌ ಸಾಮಿ, ತಸ್ಲಿಮಾ ನಸ್ರೀನ್‌ಗೂ ಪೌರತ್ವ ನೀಡಿದ್ದೇವೆ: ನಿರ್ಮಲಾ ಸೀತಾರಾಮನ್

ಸಿಎಎ ಸಮರ್ಥಿಸಿಕೊಂಡ ಹಣಕಾಸು ಸಚಿವೆ
Last Updated 19 ಜನವರಿ 2020, 10:29 IST
ಅಕ್ಷರ ಗಾತ್ರ

ಚೆನ್ನೈ:ಪಾಕಿಸ್ತಾನ ಮೂಲದ ಗಾಯಕ ಅದ್ನಾನ್‌ ಸಾಮಿ ಹಾಗೂ ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲಿಮಾ ನಸ್ರೀನ್‌ಗೂ 2016ರಲ್ಲಿ ಪೌರತ್ವ ನೀಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜತೆಗೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅವರು ಸಮರ್ಥಿಸಿಕೊಂಡಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, ‘ಕಳೆದ 6 ವರ್ಷಗಳಲ್ಲಿ ಪಾಕಿಸ್ತಾನದ 2,838, ಆಫ್ಗಾನಿಸ್ತಾನದ 914, ಬಾಂಗ್ಲಾದೇಶದ 172ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗಿದೆ. ಇದರಲ್ಲಿ ಮುಸ್ಲಿಮರೂ ಇದ್ದಾರೆ. 1964ರಿಂದ 2008ರ ಅವಧಿಯಲ್ಲಿ 4 ಲಕ್ಷ ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡಲಾಗಿದೆ. 2014ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಗಾನಿಸ್ತಾನದಿಂದ ಬಂದ 566 ಮುಸ್ಲಿಮರಿಗೆ ಪೌರತ್ವ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘2016–2018ರ ಅವಧಿಯಲ್ಲಿ ಆಫ್ಗಾನಿಸ್ತಾನದ ಮುಸ್ಲಿಮರಿಗೆ ಮತ್ತು ಪಾಕಿಸ್ತಾನದ 1,595 ಮಂದಿ ವಲಸಿಗರಿಗೆ ಪೌರತ್ವ ನೀಡಲಾಗಿದೆ. 2016ರಲ್ಲಿ ಅದ್ನಾನ್‌ ಸಾಮಿ ಹಾಗೂ ಲೇಖಕಿ ತಸ್ಲಿಮಾ ನಸ್ರೀನ್‌ಗೂ ಪೌರತ್ವ ನೀಡಲಾಗಿದೆ. ಈ ಅಂಶಗಳು, ನಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಿವೆ’ ಎಂದುನಿರ್ಮಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT