ನಕ್ಸಲ್‌ ದಾಳಿಗೆ ನಾಲ್ವರು ಯೋಧರು ಹುತಾತ್ಮ

ಶನಿವಾರ, ಏಪ್ರಿಲ್ 20, 2019
23 °C

ನಕ್ಸಲ್‌ ದಾಳಿಗೆ ನಾಲ್ವರು ಯೋಧರು ಹುತಾತ್ಮ

Published:
Updated:

ರಾಯಪುರ: ಛತ್ತೀಸಗಡದಲ್ಲಿ ಗುರುವಾರ ನಡೆದ ನಕ್ಸಲರ ದಾಳಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ನಾಲ್ವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳಿರುವಾಗ ಈ ದಾಳಿ ನಡೆದಿದೆ.

ಕಾಂಕೇರ್‌ ಜಿಲ್ಲೆಯ ಮಹ್ಲಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಕ್ಸಲರು, ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಿಎಸ್‌ಎಫ್‌ನ 114ನೇ ಬೆಟಾಲಿಯನ್‌ ಮತ್ತು ಜಿಲ್ಲಾ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ನಕ್ಸಲ್‌ ನಿಗ್ರಹ ದಳದ ಡಿಐಜಿ ಸುಂದರರಾಜ್‌ ತಿಳಿಸಿದ್ದಾರೆ.

ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ. ಕಾಂಕೇರ್‌, ಮಹಾಸಮುಂದ್‌, ರಾಜನಾಂದಗಾವ್‌ ಲೋಕಸಭಾ ಕ್ಷೇತ್ರಗಳಿಗೆ  ಇದೇ 18ರಂದು ಚುನಾವಣೆ (ಎರಡನೇ ಹಂತ) ನಡೆಯಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !