ಪ್ರಯಾಗರಾಜ್‌ ಕುಂಭಮೇಳದಲ್ಲಿ ರಾಷ್ಟ್ರಪತಿಯಿಂದ ಗಂಗಾ ಪೂಜೆ

7

ಪ್ರಯಾಗರಾಜ್‌ ಕುಂಭಮೇಳದಲ್ಲಿ ರಾಷ್ಟ್ರಪತಿಯಿಂದ ಗಂಗಾ ಪೂಜೆ

Published:
Updated:
Prajavani

ಅಲಹಾಬಾದ್‌: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಅವರ ಪತ್ನಿ ಸವಿತಾ ಕೋವಿಂದ್‌ ಗುರುವಾರ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಗಂಗಾ ಪೂಜೆ ನೆರವೇರಿಸಿದರು.

ರಾಷ್ಟ್ರಪತಿಯವರು ಅರ್ಧ ಗಂಟೆಯವರೆಗೆ ತ್ರಿವೇಣಿ ಸಂಗಮದಲ್ಲಿದ್ದರು. ಪ್ರಮುಖ ಸಾಧುಗಳ ಜತೆ ಚರ್ಚೆ ನಡೆಸಿದರು.

ಕೋವಿಂದ್‌ ಹಾಗೂ ಅವರ ಪತ್ನಿ ಭಾರತೀಯ ವಾಯು ಸೇನೆಯ ವಿಶೇಷ ವಿಮಾನದಲ್ಲಿ ಬೆಳಿಗ್ಗೆ 9.30ಕ್ಕೆ ಬಂದರು. ರಾಜ್ಯಪಾಲ ರಾಮ್‌ ನಾಯಕ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರಮಾಡಿಕೊಂಡರು. ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ, ಆರೋಗ್ಯ ಸಚಿವ ಸಿದ್ಧಾರ್ಥ ನಾಥ್‌ ಸಿಂಗ್‌ ಮತ್ತಿತರ ಸಚಿವರು ಗಂಗಾ ಪೂಜೆ ಸಂದರ್ಭದಲ್ಲಿ ಇದ್ದರು.

ಸಂಜೆ 4.30ಕ್ಕೆ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !