ಬುಧವಾರ, ಜನವರಿ 29, 2020
28 °C

ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅಧಿಕಾರ ಸ್ವೀಕಾರ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

General Bipin Rawat

ನವದೆಹಲಿ: ಜನರಲ್ ಬಿಪಿನ್ ರಾವತ್ ಅವರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್‌) ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. 

 ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ರಾವತ್, ಮೂರೂ ರಕ್ಷಣಾ ಪಡೆಗಳು ಸಂಘಟಿತ ರೀತಿಯಲ್ಲಿ ಕಾರ್ಯವೆಸಗಬೇಕು. ನಾವೆಲ್ಲರೂ ತಂಡವಾಗಿ ಕಾರ್ಯ ನಿರ್ವಹಿಸೋಣ ಎಂದಿದ್ದಾರೆ.
1+1+1 ಎಂಬ ರೀತಿಯಲ್ಲಿ ಈ ತಂಡದ ಗುರಿ ಮೂರು ಅಲ್ಲ, ಅದು ಐದು ಅಥವಾ ಏಳು ಆಗಿರಬಹುದು. ಸಂಘಟಿತ ರೀತಿಯಲ್ಲಿ ನಮ್ಮ ಪ್ರಯತ್ನ ಮತ್ತಷ್ಟು ಹೆಚ್ಚು ಇರಬೇಕು. ಏಕೀಕರಣದ ಮೂಲಕ ನಾವು ಮತ್ತಷ್ಟು ಸಾಧಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ

ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಜಂಟಿ ತರಬೇತಿ ನೀಡುವುದರ ಬಗ್ಗೆ ಸಿಡಿಎಸ್ ಹೆಚ್ಚಿನ ಗಮನ ಹರಿಸುವುದು ಎಂದು  ಅವರು ಹೇಳಿದ್ದಾರೆ. 

ಭೂಸೇನೆ, ವಾಯುಸೇನೆ, ಹಾಗೂ ನೌಕಾಸೇನೆಗಳಿಗೆ ಒಟ್ಟಾಗಿ ‘ರಕ್ಷಣಾ ಪಡೆಗಳ ಮುಖ್ಯಸ್ಥ'ರಾಗಿದ್ದಾರೆ ಬಿಪಿನ್ ರಾವತ್.

ಇದನ್ನೂ ಓದಿ: ಸಿಡಿಎಸ್‌ ಹುದ್ದೆ ಸೃಷ್ಟಿ: ರಕ್ಷಣಾವ್ಯವಸ್ಥೆಯಲ್ಲೊಂದು ಪರಿವರ್ತನೆ

ಅಧಿಕಾರ ಸ್ವೀಕಾರಕ್ಕೆ ಮುನ್ನ ಜನರಲ್  ರಾವತ್ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಆಮೇಲೆ ಅವರಿಗೆ ಗೌರವಾದರಗಳಿಂದ ಸ್ವಾಗತ ಕೋರಲಾಯಿತು. ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ಮಂಗಳವಾರ ನಿವೃತ್ತಿಯಾದ ರಾವತ್, ಭಾರತದ ಮೊದಲ ಸಿಡಿಎಸ್ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು