ಬುಧವಾರ, ಆಗಸ್ಟ್ 4, 2021
20 °C

ಕೋವಿಡ್‌–19 ಚಿಕಿತ್ಸೆಗೆ ಗ್ಲೆನ್‌ಮಾರ್ಕ್‌ನಿಂದ ಔಷಧ: ಪ್ರತಿ ಮಾತ್ರೆಗೆ ₹103

ಪಿಟಿಐ Updated:

ಅಕ್ಷರ ಗಾತ್ರ : | |

 ಫ್ಯಾಬಿಫ್ಲೂ (FabiFlu) ಮಾತ್ರೆ –ಟ್ವಿಟರ್‌ ಚಿತ್ರ

ನವದೆಹಲಿ: ಕೋವಿಡ್‌–19 ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಆ್ಯಂಟಿ ವೈರಲ್‌ ಔಷಧವನ್ನು ಬಿಡುಗಡೆ ಮಾಡಿರುವುದಾಗಿ ಗ್ಲೆನ್‌ಮಾರ್ಕ್ ಔಷಧ ತಯಾರಿಕಾ ಸಂಸ್ಥೆ ಶನಿವಾರ ಹೇಳಿದೆ. ಫ್ಯಾಬಿಫ್ಲೂ (FabiFlu) ಬ್ರ್ಯಾಂಡ್‌ ಹೆಸರಿನಲ್ಲಿ ಮಾತ್ರೆಗಳನ್ನು ಹೊರತರಲಾಗಿದ್ದು, ಪ್ರತಿ ಮಾತ್ರೆಗೆ ಸುಮಾರು ₹103 ಬೆಲೆ ಇದೆ.

ಫೆವಿಪಿರವಿರ್‌ (Favipiravir) ಆ್ಯಂಟಿ ವೈರಲ್‌ ಔಷಧವು 200 ಎಂಜಿ ಮಾತ್ರೆಗಳ ರೂಪದಲ್ಲಿ ಸಿದ್ಧಪಡಿಸಲಾಗಿದೆ. 34 ಮಾತ್ರೆಗಳಿರುವ ಸ್ಟ್ರಿಪ್‌ಗೆ ಗರಿಷ್ಠ ಮಾರಾಟ ಬೆಲೆ ₹3,500 ಇರುವುದಾಗಿ ಗ್ಲೆನ್‌ಮಾರ್ಕ್‌ ಫಾರ್ಮಾಸ್ಯೂಟಿಕಲ್ಸ್ ಹೇಳಿದೆ.

ಕೋವಿಡ್‌–19 ಚಿಕಿತ್ಸೆಗಾಗಿ ಭಾರತದಲ್ಲಿ ಅನುಮತಿ ದೊರೆತಿರುವ ಮೊದಲ ಮಾತ್ರೆ ಫ್ಯಾಬಿಫ್ಲೂ. ಇದು ವೈದ್ಯರ ಸಲಹೆ ಮೇರೆಗೆ ಪಡೆಯಬಹುದಾದ ಔಷಧವಾಗಿದೆ.

ಮೊದಲ ದಿನ ಎರಡು ಬಾರಿ 1,800 ಎಂಜಿ ಪ್ರಮಾಣದಷ್ಟು ಔಷಧ, ನಂತರ 14 ದಿನಗಳ ವರೆಗೂ ನಿತ್ಯ ಎರಡು ಬಾರಿ 800 ಎಂಜಿ ಪ್ರಮಾಣದ ಔಷಧ ತೆಗೆದುಕೊಳ್ಳಬಹುದು ಎಂದಿದೆ.

ಕೊರೊನಾ ಸೋಂಕು ಪರಿಣಾಮ ಸಾಧಾರಣ ಮಟ್ಟದಲ್ಲಿರುವ ರೋಗಿಗಳಿಗೆ ಈ ಔಷಧ ಶೇ 88ರಷ್ಟು ಫಲಿತಾಂಶ ನೀಡಿರುವುದಾಗಿ ಗ್ಲೆನ್‌ಮಾರ್ಕ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು