ಭಾನುವಾರ, ಆಗಸ್ಟ್ 14, 2022
26 °C

ಗೋವಾ: ಜೂನ್‌ 30ರವರೆಗೆ ಮಸೀದಿಗಳು ತೆರೆಯಲ್ಲ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Coronavirus lockdown mosques

ಪಣಜಿ: ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದಾಗಿ, ಮುಂಜಾಗ್ರತಾ ಕ್ರಮವಾಗಿ ಗೋವಾದಲ್ಲಿ ಜೂನ್‌ 30ರವರೆಗೆ ಮಸೀದಿಗಳನ್ನು ತೆರೆಯದೇ ಇರಲು ಅಖಿಲ ಗೋವಾ ಮುಸ್ಲಿಂ ಜಮಾತ್‌ ಒಕ್ಕೂಟವು ನಿರ್ಧರಿಸಿದೆ.

ಜೂನ್‌ 8ರಿಂದ ಲಾಕ್‌ಡೌನ್‌ ಸಡಿಲಿಕೆ ಆರಂಭವಾಗಲಿದ್ದು ‘ಅನ್‌ಲಾಕ್‌ 1’ರಲ್ಲಿ , ದೇವಸ್ಥಾನ, ಮಸೀದಿ, ಚರ್ಚ್‌ಗಳು ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಭಕ್ತರು ಭೇಟಿ ನೀಡಲು ಷರತ್ತುಬದ್ಧ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ‘ಸಮುದಾಯದಲ್ಲಿ ಸೋಂಕು ಹರಡುವ ಭೀತಿ ಇರುವುದರಿಂದ ಸಮುದಾಯದ ಜನರು ಹಾಗೂ ಸಮಾಜದ ಹಿತದೃಷ್ಟಿಯಿಂದ ಗೋವಾದಲ್ಲಿ ಮಸೀದಿಗಳನ್ನು ತೆರೆಯುವುದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಶೇಖ್‌ ಬಶೀರ್‌ ಅಹಮ್ಮದ್‌ ಶನಿವಾರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು