ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವೀಸಾ ಅಮಾನತು, ಸಾಗರೋತ್ತರ ಭಾರತೀಯ ಕಾರ್ಡ್‌ದಾರರ ಪ್ರಯಾಣಕ್ಕೆ‌ ನಿಷೇಧ

ಕೇಂದ್ರ ಗೃಹ ಸಚಿವಾಲಯ ಆದೇಶ
Last Updated 5 ಮೇ 2020, 15:45 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣಕ್ಕಾಗಿ ಅಂತರರಾಷ್ಟ್ರೀಯ ಪ್ರಯಾಣ ಸ್ಥಗಿತವಾಗಿರುವವರೆಗೂ ಎಲ್ಲ ವೀಸಾಗಳನ್ನು ಅಮಾನತುಗೊಳಿಸಿರುವುದಾಗಿ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ) ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ಸೋಮವಾರ ಪ್ರತ್ಯೇಕ ಆದೇಶ ಹೊರಡಿಸಿರುವ ಗೃಹ ಸಚಿವಾಲಯವು ಲಾಕ್‌ಡೌನ್‌ನಿಂದಾಗಿ ಭಾರತದಲ್ಲಿ ಉಳಿದುಕೊಂಡಿರುವ ವಿದೇಶಿಯರ ವೀಸಾ ಅವಧಿಯನ್ನು ಶುಲ್ಕರಹಿತವಾಗಿ ವಿಸ್ತರಣೆ ಮಾಡುವುದಾಗಿ ತಿಳಿಸಿದೆ.

ಅಂತರರಾಷ್ಟ್ರೀಯ ಪ್ರಯಾಣ ಆರಂಭಗೊಂಡ ನಂತರದ 30 ದಿನಗಳವರೆಗೆ ವೀಸಾ ವಿಸ್ತರಣೆ ಅನ್ವಯವಾಗಲಿದೆ.

‘ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್‌ (ಒಸಿಐ)’ ಹೊಂದಿರುವವರಿಗೆ ನೀಡುವ ಜೀವಿತಾವಧಿ ವೀಸಾವನ್ನೂ ಅಂತರರಾಷ್ಟ್ರೀಯ ಪ್ರಯಾಣ ಸ್ಥಗಿತವಾಗಿರುವವರೆಗೂ ಅಮಾನತಿನಲ್ಲಿಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಪ್ರಸ್ತುತ ಭಾರತದಲ್ಲಿರುವ ಒಸಿಐ ಕಾರ್ಡ್‌ದಾರರು ಎಷ್ಟು ಸಮಯದ ವರೆಗೆ ಬೇಕಾದರೂ ದೇಶದಲ್ಲಿರಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT