ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರವಾದಿ ಗ್ರೇಟಾ ಥನ್‌ಬರ್ಗ್‌ಗೆ 17 ವರ್ಷ: ವಿಶಿಷ್ಟ ರೀತಿ ಹುಟ್ಟುಹಬ್ಬ ಆಚರಣೆ!

Last Updated 4 ಜನವರಿ 2020, 5:47 IST
ಅಕ್ಷರ ಗಾತ್ರ

ಸ್ಟಾಕ್ಹೋಮ್ (ಸ್ವೀಡನ್‌): ಹವಾಮಾನ ವೈಪರೀತ್ಯದ ವಿರುದ್ಧದಹೋರಾಟದ ಮೂಲಕ ಜಗತ್ತಿನ ಮನೆ ಮಾತಾಗಿರುವ ಪರಿಸರ ವಾದಿ ಗ್ರೇಟಾ ಥನ್‌ಬರ್ಗ್‌ ಶುಕ್ರವಾರ 17ನೇ ವರ್ಷಕ್ಕೆ ಕಾಲಿಟ್ಟರು.

ಹುಟ್ಟು ಹಬ್ಬ ಎನ್ನುತ್ತಲೇ ಕಣ್ಣಮುಂದೆ ಬರುವ ಸಂಭ್ರಮಾಚರಣೆ, ಕೇಕ್‌ ಕತ್ತರಿಸುವ ಪರಿಪಾಠಕ್ಕೆ ಅವರು ಮಣೆ ಹಾಕಿಲ್ಲ. ಆದರೆ, ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿ ಸುದ್ದಿಯಾಗಿದ್ದಾರೆ.

ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಅವರು ಪರಿಸರದ ಹೋರಾಟವನ್ನು ಮುಂದುವರಿಸಿದ್ದಾರೆ. ಸ್ವೀಡನ್‌ನ ಸಂಸತ್ ಎದುರು ಸತತ ಏಳು ಗಂಟೆಗಳ ಕಾಲ ಪ್ರತಿಭಟನೆ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಪರಿಸರ ರಕ್ಷಣೆಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರೇಟಾ ಎರಡು ವರ್ಷಗಳ ಹಿಂದೆ Friday for Future ಹೆಸರಲ್ಲಿ ಸ್ವೀಡನ್‌ನ ಸಂಸತ್‌ನ ಎದುರು school strike for climate ಎಂಬ ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಪ್ರತಿ ಶುಕ್ರವಾರ ಶಾಲೆಗೆ ರಜೆ ಹಾಕಿ ಈ ಪ್ರತಿಭಟನೆ ನಡೆಸುತ್ತಿದ್ದ ಗ್ರೇಟಾ ಈ ಶುಕ್ರವಾರವೂ ಅದನ್ನು ಮುಂದುವರಿಸಿದ್ದರು.

‘ಎಂದಿನ ಶುಕ್ರವಾರದಂತೆಯೇ ನಾನು ಈ ಶುಕ್ರವಾರವೂ ಪ್ರತಿಭಟನೆ ನಡೆಸುತ್ತಿದ್ದೇನೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರ ವರೆಗೆ ಪ್ರತಿಭಟನೆ ನಡೆಸುತ್ತೇನೆ. ನಂತರ ಮನೆಗೆ ಹೋಗುತ್ತೇನೆ ಎಂದು ‘ಟೈಮ್‌ ಮ್ಯಾಗಸೈನ್‌–2019 ವರ್ಷದ ವ್ಯಕ್ತಿಯೂ ಆಗಿರುವ ಗ್ರೇಟಾ ಥನ್‌ಬರ್ಗ್‌ ಅವರು ಹೇಳಿಕೊಂಡಿದ್ದಾರೆ.

ಈ ಹಿಂದಿನ ವರ್ಷ ಅತ್ಯಂತ ವಿಚಿತ್ರವಾಗಿತ್ತು. ಆದರೆ, ಅವಿಸ್ಮರಣೀಯವೂ ಆಗಿತ್ತು. ಯಾಕೆಂದರೆ ಆ ವರ್ಷ ನಾನು ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಪರಿಸರಕ್ಕಾಗಿ ನಾನು ಏನಾದರೂ ಮಾಡಬೇಕು. ಅದು ಪರಿಣಾಮ ಬೀರುವಂತಿರಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರೇಟಾ ಥನ್‌ಬರ್ಗ್‌ ಈಗಾಗಲೇ ಜಗತ್ತಿನ ಹಲವು ರಾಷ್ಟ್ರಗಳನ್ನು ಸುತ್ತಿದ್ದಾರೆ. ಕಾರು, ರೈಲು, ದೋಣಿಗಳಲ್ಲಿ ಮಾತ್ರ ಪ್ರಯಾಣಿಸುವ ಆಕೆ ತಮ್ಮ ಪ್ರವಾಸಕ್ಕೆ ವಿಮಾನ ಏರಿಲ್ಲ.
ಕಳೆದ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಹವಾಮಾನ ಬದಲಾವಣೆ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ್ದ ಥನ್‌ಬರ್ಗ್‌ ಹವಾಮಾನ ಸಂಕಷ್ಟಕ್ಕೆ ಕಾರಣರಾದ ಜಗತ್ತಿನ ನಾಯಕರಿಗೆ ‘ಹೌ ಡೇರ್ ಯೂ?’ ಎಂದು ಪ್ರಶ್ನೆ ಹಾಕಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT