ಶನಿವಾರ, ಆಗಸ್ಟ್ 17, 2019
27 °C

ಪ್ರವಾಹದ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲಲ್ಲಿ ಹೊತ್ತು 1.5 ಕಿಮೀ ನಡೆದ ಪೊಲೀಸ್!

Published:
Updated:

ಗಾಂಧಿ ನಗರ: ಗುಜರಾತಿನ ಮೋರ್ಬಿ ಜಿಲ್ಲೆಯ ಕಲ್ಯಾಣ್‌ಪುರ್ ಗ್ರಾಮದಲ್ಲಿ ಪ್ರವಾಹ ಮಧ್ಯೆ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಕೂರಿಸಿ 1.5 ಕಿಮೀ ನಡೆದ ಪೊಲೀಸ್ ಸಿಬ್ಬಂದಿಯ ರಕ್ಷಣಾ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.

ಗುಜರಾತಿನ ಪೊಲೀಸ್ ಸಿಬ್ಬಂದಿ ಪೃಥ್ವಿರಾಜ್ ಜಡೇಜ ಮಕ್ಕಳಿಬ್ಬರನ್ನು ಹೊತ್ತು ಪ್ರವಾಹದ ಮಧ್ಯೆ ನಡೆದು ರಕ್ಷಣೆ ಮಾಡಿರುವ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವೀಟಿಸಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 ಜಡೇಜ ಅವರ ಸಾಹಸ ಕಾರ್ಯವನ್ನು ಅಭಿನಂದಿಸಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡಾ  ಟ್ವೀಟ್ ಮಾಡಿದ್ದಾರೆ.
 

Post Comments (+)