ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಶಿಕ್ಷಣ ಸಚಿವ ಭೂಪೇಂದ್ರಸಿಂಗ್‌ ಚೂಡಾಸಮಾ ಗೆಲುವು ಅಸಿಂಧು: ಹೈಕೋರ್ಟ್

2017ರ ಚುನಾವಣೆ ಫಲಿತಾಂಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ
Last Updated 12 ಮೇ 2020, 19:45 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ ಬಿಜೆಪಿ ಸರ್ಕಾರಕ್ಕೆ ಮಂಗಳವಾರ ತೀವ್ರ ಮುಜುಗರ ಉಂಟಾಗುವ ಬೆಳವಣಿಗೆಯಾಗಿದೆ. ಶಿಕ್ಷಣ ಹಾಗೂ ಕಾನೂನು ಸಚಿವ ಭೂಪೇಂದ್ರಸಿಂಗ್‌ ಚೂಡಾಸಮಾಅವರು 2017ರಲ್ಲಿ ಧೋಲ್ಕಾ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದನ್ನು ಗುಜರಾತ್‌ ಹೈಕೋರ್ಟ್‌ ಮಂಗಳವಾರ ಅಸಿಂಧುಗೊಳಿಸಿದೆ.

ಹಲವು ಅಕ್ರಮಗಳನ್ನು ಎಸಗಿ ಚೂಡಾಸಮಾ ಅವರು ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕ ಅಶ್ವಿನ್‌ ರಾಠೋಡ್‌ ಅವರು ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಮಂಗಳವಾರ ತೀರ್ಪು ನೀಡಿದ ನ್ಯಾಯಮೂರ್ತಿ ಪರೇಶ್‌ ಉಪಾಧ್ಯಾಯ ಅವರು, 'ಮತಎಣಿಕೆಯಲ್ಲಿ ಅಕ್ರಮ ನಡೆದಿದೆ' ಎನ್ನುವ ಅಂಶವನ್ನು ಎತ್ತಿಹಿಡಿದ್ದಾರೆ.

ಚೂಡಾಸಮಾ ಎದುರು 327 ಮತಗಳ ಅಂತರದಿಂದ ಸೋಲು ಕಂಡಿದ್ದ ರಾಠೋಡ್‌ ಅವರು, 'ಮತಪತ್ರಗಳ ಮೂಲಕ ಚಲಾವಣೆಯಾಗಿದ್ದ 429 ಮತಗಳನ್ನು ಚುನಾವಣಾ ಅಧಿಕಾರಿ ಧವಲ್‌ ಜನಿ ಅಕ್ರಮವಾಗಿ ತಿರಸ್ಕರಿಸಿದ್ದಾರೆ. ಇವಿಎಂಗಳಲ್ಲಿದ್ದ29 ಮತಗಳನ್ನು ಎಣಿಕೆ ಮಾಡಿಲ್ಲ. 1,59,946 ಮತದಾರರು ಮತ ಚಲಾಯಿಸಿದ್ದಾರೆ ಎಂದು ಅಧಿಕಾರಿ ವರದಿ ನೀಡಿದ್ದರು. ಆದರೆ ಅಂತಿಮವಾಗಿ ಫಲಿತಾಂಶ ಘೋಷಿಸಿದಾಗ 1,59,917 ಮತ ಚಲಾವಣೆ ಆಗಿದೆ ಎಂದು ಹೇಳಿದ್ದರು. ಇವುಗಳ ನಡುವೆ 29 ಮತಗಳ ವ್ಯತ್ಯಾಸ ಇದೆʼ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.

ರಾಠೋಡ್‌ ಅರ್ಜಿ ಸಲ್ಲಿಸಿದ ಬಳಿಕ ಅದನ್ನು ರದ್ದುಪಡಿಸಬೇಕು ಎಂದು ಚೂಡಾಸಮಾ ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ತಿರಸ್ಕರಿಸಿದ್ದ ನ್ಯಾಯಮೂರ್ತಿ ಉಪಾಧ್ಯಾಯ ಅವರು, ಈ ವಿಷಯದಲ್ಲಿ ವಿಚಾರಣೆ ನಡೆಸುವುದು ಅವಶ್ಯಕವಾಗಿದೆ ಎಂದಿದ್ದರು. ಗೆಲುವಿನ ಅಂತರ ತೀರಾ ಕಡಿಮೆ ಇರುವ ಇನ್ನೂ 20 ವಿಧಾನಸಭಾ ಕ್ಷೇತ್ರಗಳಲ್ಲಿನ ಚುನಾವಣೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳ ವಿಚಾರಣೆ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT