ಪಟ್ನಾ: ಜೂನಿಯರ್ ವಿಶ್ವಕಪ್ ಶೂಟಿಂಗ್‌ಗೆ ತೆರಳಲು ಸಜ್ಜಾಗಿರುವ ಶೂಟರ್ ಪ್ರಿಯಾ ಸಿಂಗ್ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ₹ 4.5 ಲಕ್ಷ ನೀಡಿದ್ದಾರೆ.
ಜರ್ಮನಿಯಲ್ಲಿ ನಡೆಯಲಿರುವ ಸ್ಪರ್ಧೆಗೆ ಪ್ರಿಯಾ ಅವರು ಬಾಡಿಗೆಗೆ ಪಡೆದ ರೈಫಲ್ ಜೊತೆ ತೆರಳಲು ಸಜ್ಜಾಗಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅವರ ಪ್ರಯಾಣ ಮತ್ತು ವಾಸದ ವ್ಯವಸ್ಥೆಗಾಗಿ ನೆರವು ನೀಡಿರುವುದಾಗಿ ಆದಿತ್ಯನಾಥ ಹೇಳಿದ್ದಾರೆ
ಎಂದು ವೆಬ್‌ಸೈಟ್‌ಗಳು ವರದಿ ಮಾಡಿವೆ.
‘ಪ್ರಿಯಾ ಅವರ ನೋವಿನ ಕಥೆ ಕೇಳಿದ ಕೂಡಲೇ ಮೀರಟ್ ಜಿಲ್ಲಾಧಿಕಾರಿಗೆ ಕರೆ ಮಾಡಿ ಎಲ್ಲ ರೀತಿಯ ನೆರವು ಒದಗಿಸುವಂತೆ ಸೂಚಿಸಿದ್ದೇನೆ. ಸರ್ಕಾರದ ವತಿಯಿಂದ ಹಣ ನೀಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.