ದೆಹಲಿ ಶಾಲೆಗಳಲ್ಲಿ ‘ಹ್ಯಾಪಿನೆಸ್ ಕರಿಕ್ಯುಲಂ’

5

ದೆಹಲಿ ಶಾಲೆಗಳಲ್ಲಿ ‘ಹ್ಯಾಪಿನೆಸ್ ಕರಿಕ್ಯುಲಂ’

Published:
Updated:
ಟಿಬೆಟನ್ ಧರ್ಮಗುರು ದಲೈಲಾಮ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು –ಪಿಟಿಐ ಚಿತ್ರ

ನವದೆಹಲಿ: ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ದೆಹಲಿ ಸರ್ಕಾರ, ಮತ್ತೊಂದು ಹೊಸ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ದೆಹಲಿ ಸರ್ಕಾರಿ ಶಾಲೆಗಳಲ್ಲಿ ‘ಹ್ಯಾಪಿನೆಸ್ ಕರಿಕ್ಯುಲಂ’ (ಸಂತಸದ ಪಠ್ಯ) ಆರಂಭಿಸಲಾಗಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಟಿಬೆಟನ್ ಧರ್ಮಗುರು ದಲೈಲಾಮ ಅವರು ಸೋಮವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಮೂರನೇ ಹಂತವಾಗಿ ಈ ‘ಹ್ಯಾಪಿನೆಸ್ ಕರಿಕ್ಯುಲಂ’ಗೆ ನಮ್ಮ ಸರ್ಕಾರ ಚಾಲನೆ ನೀಡಿದ್ದು, ಇದು ಐತಿಹಾಸಿಕ ಸಂದರ್ಭ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

‘ಇದಕ್ಕೂ ಮೊದಲು, ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಕರಲ್ಲಿ ಸ್ಫೂರ್ತಿ ತುಂಬಲು ಗಮನ ನೀಡಲಾಯಿತು. ಶಿಕ್ಷಣ ನಮ್ಮ ಆದ್ಯತೆಯ ಕ್ಷೇತ್ರ. ಶಿಕ್ಷಣಕ್ಕೆಂದೇ ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳು ತುರ್ತಾಗಿ ಒಂದು ವರ್ಷ ಆದ್ಯತೆ ನೀಡಬೇಕು’ ಎಂದರು.

‘ಉತ್ತಮ ವ್ಯಕ್ತಿತ್ವ’ಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿಲ್ಲದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಪರಿಷ್ಕರಿಸಬೇಕು. ಈ ನಿಟ್ಟಿನಲ್ಲಿ ‘ಹ್ಯಾಪಿನೆಸ್‌ ಕರಿಕ್ಯುಲಂ’ ಪ್ರಮುಖ ಹೆಜ್ಜೆಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.   

‘ಭಾರತಕ್ಕಷ್ಟೇ ಸಾಮರ್ಥ್ಯ’: ‘ಆಧುನಿಕ ಹಾಗೂ ಪುರಾತನ ಜ್ಞಾನ ಒಟ್ಟುಗೂಡಿಸಲು ಭಾರತಕ್ಕೆ ಮಾತ್ರ ಸಾಮರ್ಥ್ಯ ಇರುವುದು. ಇದರಿಂದ ಭಾರತ ವಿಶ್ವವನ್ನೇ ಮುನ್ನಡೆಸಬಹುದು. ನಕಾರಾತ್ಮಕ ಭಾವನೆಗಳಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು, ಭೌತಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಇದು ಉತ್ತಮ ಮಾರ್ಗ’ ಎಂದು ದಲೈಲಾಮ ಅಭಿಪ್ರಾಯಪಟ್ಟರು.

ಭಾರತದ ಪುರಾತನ ಜ್ಞಾನವನ್ನು ಮತ್ತೆ ಮುನ್ನೆಲೆಗೆ ತರಲು ಹಾಗೂ ಬೌದ್ಧಧರ್ಮ ಅನುಸರಿಸುವ ಇತರ ದೇಶಗಳಿಗೆ ಈ ಜ್ಞಾನ ಪಸರಿಸಲು ದಲೈಲಾಮ ಕರೆ ನೀಡಿದರು. 

 ಮೌಲ್ಯಾಧರಿತ ಶಿಕ್ಷಣ

‘ಹ್ಯಾಪಿನೆಸ್ ಕರಿಕ್ಯುಲಂ’ನಲ್ಲಿ ಧ್ಯಾನ, ಮೌಲ್ಯಾಧರಿತ ಶಿಕ್ಷಣ, ಮಾನಸಿಕ ಸ್ವಾಸ್ಥ್ಯಕ್ಕೆ ಚಟುವಟಿಕೆಗಳನ್ನು ಸೇರ್ಪಡೆಗೊಳಿಸಲಾಗಿದೆ. ದೆಹಲಿಯ 40 ಶಾಲೆಗಳ ಶಿಕ್ಷಕರು, ಶಿಕ್ಷಣ ತಜ್ಞರು ಹಾಗೂ ಸ್ವಯಂಸೇವಕರು ಆರು ತಿಂಗಳ ಅವಧಿಯಲ್ಲಿ ಈ ಪಠ್ಯ ರೂಪಿಸಿದ್ದಾರೆ. 

 

 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !