ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತಕ್ಕೆ ₹15 ಲಕ್ಷದ ಭರವಸೆ ಕೊಡಲಾಗದು’

Last Updated 15 ಮಾರ್ಚ್ 2019, 20:21 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕೆಲ ದಿನಗಳ ಹಿಂದೆ ಆ ಪಕ್ಷಕ್ಕೆ ಸೇರಿರುವ 25 ವರ್ಷದ ಹಾರ್ದಿಕ್‌ ಪಟೇಲ್‌, ಬಿಜೆಪಿ ವಿರುದ್ಧದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲಲು ಬಯಸುವವರು. ಕಾಂಗ್ರೆಸ್‌ ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧ, ಪ್ರೀತಿ ಮತ್ತು ಸೌಹಾರ್ದದ ಸಂದೇಶದ ಜತೆಗೆ ಜನರ ಬಳಿಗೆ ಹೋಗುತ್ತೇವೆ ಎಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ

* ಯಾರನ್ನೂ ಬೆದರಿಸುವುದಿಲ್ಲ...

‘ತಮ್ಮ ಮನದಾಳವನ್ನು ಬಿಡಿಸಿಡಲು ಜನರು ಭಯಪಡುವ ಅಗತ್ಯ ಇಲ್ಲ ಅಥವಾ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದವರನ್ನು ಬೆದರಿಸುವ ಕೆಲಸವನ್ನೂ ಮಾಡುವುದಿಲ್ಲ. ಪ್ರೀತಿ ಮತ್ತು ಸೌಹಾರ್ದದ ಸಂದೇಶದೊಂದಿಗೆ ಜನರನ್ನು ಭೇಟಿಯಾಗುತ್ತೇನೆ. ರಾಜಕೀಯದಲ್ಲಿ ಇಲ್ಲದ ವ್ಯಕ್ತಿಗಳನ್ನು ನಾನು ಕಾಂಗ್ರೆಸ್‌ನ ಕಾರ್ಯಕ್ರಮಗಳಿಗೆ ಕರೆತರುತ್ತೇನೆ. ಕಾಂಗ್ರೆಸ್‌ನ 60 ವರ್ಷದ ಸಾಧನೆಗಳನ್ನು ಅವರ ಮುಂದೆ ತೆರೆದಿಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಮೋಸ ಮಾಡಿದ್ದರೂ ಈ ಮಣ್ಣಿನ ಇನ್ನೊಬ್ಬ ಮಗ ಜನರ ಪರವಾಗಿ ಹೋರಾಡಲಿದ್ದಾನೆ ಎಂಬುದನ್ನು ಜನರಿಗೆ ಹೇಳುತ್ತೇನೆ. ಮೋದಿ ಅವರಂತೆ ಮತಕ್ಕಾಗಿ ₹15 ಲಕ್ಷ ಜಮೆ ಮಾಡುತ್ತೇನೆ ಎಂಬ ಭರವಸೆ ಕೊಡಲು ನಮಗೆ ಸಾಧ್ಯವಿಲ್ಲ. ಆದರೆ, ಜನರಿಗೆ ಏನು ಬೇಕಾಗಿದೆ ಎಂಬುದನ್ನು ಕೇಳುತ್ತೇವೆ, ಅದನ್ನು ಪೂರೈಸಲು ಪ್ರಯತ್ನಿಸುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ.

*ಕಾಂಗ್ರೆಸ್‌ ಸೇರಲು ಕಾರಣವೇನು...

ನಾನು ಕಾಂಗ್ರೆಸ್‌ ಪಕ್ಷ ಸೇರಲು ಹಲವು ಕಾರಣಗಳಿವೆ. ಈ ಪಕ್ಷವು ಯಾರನ್ನೂ ಹೆದರಿಸುವುದಿಲ್ಲ, ಆ ಪಕ್ಷದ ಮುಖಂಡರ ವಿರುದ್ಧವೇ ಮಾತನಾಡಿದರೂ ಬೆದರಿಸುವುದಿಲ್ಲ. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿರುವ ವಿರೋಧಾಭಾಸ ಗಮನಿಸಿ. ನನ್ನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಒಂಬತ್ತು ತಿಂಗಳು ಜೈಲಿಗೆ ತಳ್ಳಿದ್ದರು. ನನ್ನ ಎರಡನೇ ಮನೆಯಂತಿರುವ ಮೆಹ್ಸಾನಾಕ್ಕೆಮೂರೂವರೆ ವರ್ಷ ಬಳಿಕವೂ ಹೋಗುವಂತಿಲ್ಲ. ಜನರ ಪರವಾಗಿ ಹೋರಾಡುತ್ತಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ಈ ನಿರ್ಬಂಧ ವಿಧಿಸಲಾಗಿದೆ.

* ಕಾಂಗ್ರೆಸ್‌–ಬಿಜೆಪಿ ನಡುವಣ ವ್ಯತ್ಯಾಸ...

ಬಿಜೆಪಿ ದ್ವೇಷವೇ ತುಂಬಿದ ಪಕ್ಷ. ಆದರೆ, ಕಾಂಗ್ರೆಸ್‌ ಹಾಗಲ್ಲ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಅಥವಾ ತಮ್ಮ ಮನಸ್ಸಿಲ್ಲಿ ಇರುವುದನ್ನು ಹೇಳುವ ಹಕ್ಕು ಎಲ್ಲರಿಗೂ ಇದೆ. ಬಿಜೆಪಿ ಸರ್ಕಾರ ಇದ್ದರೆ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲ.

* ಕಾಂಗ್ರೆಸ್‌ ಮಾಡಿದ್ದನ್ನು ಹೇಳುವೆ...

ಐದೇ ವರ್ಷಗಳಲ್ಲಿ ಎಲ್ಲೆಡೆಗೂ ವಿದ್ಯುತ್‌ ಕೊಟ್ಟಿದ್ದೇನೆ ಎಂದು ಮೋದಿ ಅವರು ಹೇಳುವುದು ಸರಿಯಲ್ಲ. ಮತಕ್ಕಾಗಿ ಈ ರೀತಿಯ ಪ್ರಚಾರ ತಂತ್ರ ಸಮರ್ಪಕವಲ್ಲ. ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್‌), ಐಐಟಿಗಳನ್ನು ಸ್ಥಾಪಿಸಿದ್ದು ಯಾರು? 28 ವರ್ಷಗಳ ಆಳ್ವಿಕೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಎಷ್ಟು ಶಾಲೆ ಮತ್ತು ಆಸ್ಪತ್ರೆಗಳನ್ನು ತೆರೆದಿದೆ ಎಂದು ನಾನು ಕೇಳಲು ಬಯಸುತ್ತೇನೆ.

* ಗುಜರಾತ್‌ ಬಗ್ಗೆ...

ಗುಜರಾತ್‌ನಲ್ಲಿ ಆಗಬೇಕಿರುವ ಕೆಲಸ ಸಾಕಷ್ಟಿದೆ. ರಾಜ್‌ಕೋಟ್‌ನಲ್ಲಿ ಗುಜರಾತ್‌ ಹೈಕೋರ್ಟ್‌ನ ಪೀಠ ಸ್ಥಾಪನೆಯಾಗಬೇಕು.
ಹೈಕೋರ್ಟ್‌ಗಾಗಿ ಅಹಮದಾಬಾದ್‌ಗೆ ಬರಬೇಕಿದ್ದರೆ ಸೌರಾಷ್ಟ್ರದ ಜನರು 400 ಕಿ.ಮೀ. ಪ್ರಯಾಣಿಸಬೇಕು. ಬರ, ಕೃಷಿ ಸಂಕಷ್ಟ ಮತ್ತು ನಿರುದ್ಯೋಗದಂತಹ ಸಮಸ್ಯೆಗಳು ರಾಜ್ಯದ ಬಹುಸಂಖ್ಯೆಯ ಜನರನ್ನು
ಬಾಧಿಸುತ್ತಿದೆ.

* ಮೋದಿಯನ್ನು ಎದುರಿಸುವುದು ಹೇಗೆ...

ಜನರಿಗೆ ಹೇಳಬೇಕಾದ ವಿಚಾರಗಳು ಸಾಕಷ್ಟಿವೆ. ಆರು ಕಿ.ಮೀ. ಮೆಟ್ರೊ ಮಾರ್ಗವನ್ನುಅಷ್ಟೊಂದು ಆತುರಾತುರವಾಗಿ ಉದ್ಘಾಟಿಸಲು ಬರುವ ಪ್ರಧಾನಿಯ ಬಗ್ಗೆ ಏನು ಹೇಳುವುದು. ಇಂತಹ ಪ್ರಚಾರ ಸರಿಯಲ್ಲವೇ
ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT