ಸೋಮವಾರ, ಜುಲೈ 4, 2022
22 °C

ಶಿವಿಂದರ್ ಜಾಮೀನು ಅರ್ಜಿ; ಇಡಿ ಅಭಿಪ್ರಾಯ ಕೇಳಿದ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹಣ ಅಕ್ರಮ ವರ್ಗಾವಣೆ ಕುರಿತ ರೆಲಿಗೇರ್‌ ಫಿನ್‌ವೆಸ್ಟ್‌ ಲಿಮಿಟೆಡ್‌ ಸಂಬಂಧಿತ ಪ್ರಕರಣದಲ್ಲಿ ಫೋರ್ಟಿಸ್‌ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್‌ ಸಿಂಗ್ ಸಲ್ಲಿಸಿರುವ ಜಾಮೀನು ಅರ್ಜಿ ಬಗ್ಗೆ ಹೈಕೋರ್ಟ್‌ ಸೋಮವಾರ ಜಾರಿ ನಿರ್ದೇಶನಾಲಯದ ಅಭಿಪ್ರಾಯ ಕೇಳಿದೆ.

ವಿಡಿಯೊ ಸಂವಾದದ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್ ಜೆ. ಭಂಭಾನಿ ಅವರು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿ ಮಾಡಿದರು. ವಸ್ತುಸ್ಥಿತಿ ವರದಿ ದಾಖಲಿಸುವಂತೆ ಸೂಚಿಸಿದರು. ಪ್ರಕರಣದ ವಿಚಾರಣೆ ಜುಲೈ 2ರಂದು ನಡೆಯಲಿದೆ.

ಜಾಮೀನು ಅರ್ಜಿಯನ್ನು ಕೆಳಹಂತದ ನ್ಯಾಯಾಲಯ ಜೂನ್ 18ರಂದು ವಜಾ ಮಾಡಿತ್ತು. ಸುಮಾರು ₹ 2,397 ಕೋಟಿಗೆ ಒಳಗೊಂಡ ಪ್ರಕರಣ ಇದಾಗಿದೆ ಎಂದು ಕೆಳಹಂತದ ನ್ಯಾಯಾಲಯ ಅರ್ಜಿ ವಜಾ ಮಾಡಿ ಅಭಿಪ್ರಾಯಪಟ್ಟಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು