ಗೃಹ ಸಾಲದ ಬಡ್ಡಿಗೆ ಇನ್ನಷ್ಟು ತೆರಿಗೆ ವಿನಾಯಿತಿ

ಸೋಮವಾರ, ಜೂಲೈ 22, 2019
27 °C
ಮಧ್ಯಮ ವರ್ಗಕ್ಕೆ ವರದಾನ

ಗೃಹ ಸಾಲದ ಬಡ್ಡಿಗೆ ಇನ್ನಷ್ಟು ತೆರಿಗೆ ವಿನಾಯಿತಿ

Published:
Updated:

ನವದೆಹಲಿ (ಪಿಟಿಐ): ವಸತಿ ಯೋಜನೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲು ಉದ್ದೇಶಿ
ಸಲಾಗಿದೆ. ಮಧ್ಯಮ ವರ್ಗದವರನ್ನು ಗುರಿಯಾಗಿರಿಸಿಕೊಂಡು ಈ ಪ್ರಸ್ತಾವ ಮಂಡಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮನೆ ಖರೀದಿಸಲು ಅಥವಾ ನಿರ್ಮಾಣಕ್ಕೆ ಮಂಜೂರಾದ ₹45 ಲಕ್ಷದವರೆಗಿನ ಗೃಹ ಸಾಲದ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ₹3.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಮನೆ ಖರೀದಿಸುವ ವ್ಯಕ್ತಿಗೆ ಈಗ ₹3.5 ಲಕ್ಷದವರೆಗಿನ ಹೆಚ್ಚಿನ ಬಡ್ಡಿ ಕಡಿತ ಸಿಗಲಿದೆ. ಮಧ್ಯಮ ವರ್ಗದ ಮನೆ ಖರೀದಿದಾರರು 15 ವರ್ಷಗಳ ಅವಧಿಗೆ ಸಾಲ ಪಡೆದರೆ ಸುಮಾರು ₹7 ಲಕ್ಷ ಲಾಭ ದೊರೆಯಲಿದೆ.

ಆದರೆ, ಈ ಪ್ರಯೋಜನ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾತ್ರ ಸಾಲ ಮಂಜೂ
ರಾಗಿರಬೇಕು ಹಾಗೂ ಸಾಲ ಮಂಜೂರಾದ ದಿನದಂದು ಮನೆ ಖರೀದಿದಾರರ ಹೆಸರಿನಲ್ಲಿ ಇತರ ಯಾವುದೇ ಮನೆ ಹೊಂದಿರಬಾರದು ಎನ್ನುವ ಷರತ್ತು ವಿಧಿಸಲಾಗಿದೆ.

 ಪ್ರಧಾನ ಮಂತ್ರಿ ಅವಾಸ್‌ ಯೋಜನೆಯ ಅಡಿಯಲ್ಲಿ 2021–22ರೊಳಗೆ 1.95 ಕೋಟಿ ಮನೆ ಒದಗಿಸುವ ಗುರಿ ಹೊಂದಲಾಗಿದೆ.

ವಸತಿ ಯೋಜನೆಗಾಗಿ ಹಣಕಾಸು ಒದಗಿಸುವ ಕಂಪನಿಗಳಿಗೆ ನಿಯಮಾವಳಿಗಳನ್ನು ರೂಪಿಸುವುದನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಬದಲಿಗೆ ಭಾರತೀಯ ರಿಸರ್ವ ಬ್ಯಾಂಕ್‌ ಕೈಗೊಳ್ಳಲಿದೆ.

ಆದಾಯ ತೆರಿಗೆ ಕಾಯ್ದೆ ಮತ್ತು ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ  ಕೈಗೆಟಕುವ ಬೆಲೆಯಲ್ಲಿ ಮನೆ ಕುರಿತು ವಾಖ್ಯಾನವನ್ನು ಬದಲಾಯಿಸಲು ಉದ್ದೇಶಿಸಲಾಗಿದೆ. 

ಮನೆ ವಿಸ್ತೀರ್ಣದ ಮಿತಿಯನ್ನು ಮಹಾನಗರಗಳಲ್ಲಿ 30 ಚದರ ಮೀಟರ್‌ನಿಂದ 60 ಚದರ ಮೀಟರ್‌ಗೆ ಮತ್ತು ಮಹಾನಗರವಲ್ಲದ ಪ್ರದೇಶಗಳಲ್ಲಿ 60 ಚದರ ಮೀಟರ್‌ನಿಂದ 90 ಚದರ ಮೀಟರ್‌ಗೆ ಹೆಚ್ಚಿಸುವ ಪ್ರಸ್ತಾಪ ಇದೆ. ಕೈಗೆಟುಕುವ ಮನೆಯ ವೆಚ್ಚವನ್ನು 45 ಲಕ್ಷ ಮತ್ತು ಅದಕ್ಕಿಂತ ಕಡಿಮೆ ಎಂದು ನಿಗದಿಪಡಿಸಲು ಪ್ರಸ್ತಾಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !