ಭಾನುವಾರ, ಫೆಬ್ರವರಿ 23, 2020
19 °C

ಲಂಚ ಪಡೆದ ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್‌‌ಗಾಗಿ ದೆಹಲಿ ಸಿಬಿಐ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್ ರೈ ಎಂಬುವರಿಗಾಗಿ ಸಿಬಿಐ ಶೋಧ ನಡೆಸುತ್ತಿದೆ.

ಜಿಎಸ್‌‌ಟಿ ತೆರಿಗೆ ವಂಚನೆ ಪ್ರಕರಣವನ್ನು ಮುಚ್ಚಿ ಹಾಕುವುದಾಗಿ ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ವಿಶೇಷಾಧಿಕಾರಿ ಗೋಪಾಲ್ ಕೃಷ್ಣಮಾಧವ್ ಎಂಬುವರನ್ನು ಗುರುವಾರ ಬಂಧಿಸಲಾಗಿದೆ. ಈ ಸಂಬಂಧ ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್ ರೈ (2007) ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ಸರಕು ಸಾಗಾಣಿಕೆ ಲಾರಿಗಳನ್ನು ದೆಹಲಿ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಲಾರಿಗಳನ್ನು ಬಿಡುಗಡೆ ಮಾಡಲು ₹3.30 ಲಂಚಕ್ಕಾಗಿ ಒತ್ತಾಯಿಸಲಾಗಿತ್ತು. ಮೊದಲ ಕಂತಾಗಿ ₹2.26 ಲಕ್ಷ ಕೊಡಲಾಗಿತ್ತು. ಇದೆಲ್ಲಾ ವ್ಯವಹಾರ ಮಧ್ಯವರ್ತಿ ಧೀರಜ್ ಗುಪ್ತಾ ಎಂಬಾತನ ಮೂಲಕ ನಡೆದಿತ್ತು ಎನ್ನಲಾಗಿದೆ.

ಈ ಸಂಬಂಧ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಿಬಿಐ ಆರೋಪಿಗಳ ತನಿಖೆ ನಡೆಸುತ್ತಿದೆ. ಅಧಿಕಾರಿ ಗೋಪಾಲಕೃಷ್ಣ ಮಾಧವ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು