ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ ಬಳಕೆಗೆ ಐಸಿಎಂಆರ್‌ ಶಿಫಾರಸು

Last Updated 15 ಜೂನ್ 2020, 11:21 IST
ಅಕ್ಷರ ಗಾತ್ರ

ನವದೆಹಲಿ: ಕಂಟೈನ್‌ಮೆಂಟ್‌ ಪ್ರದೇಶ ಹಾಗೂ ಆಸ್ಪತ್ರೆಗಳಲ್ಲಿಕೋವಿಡ್‌–19 ಪರೀಕ್ಷೆಗಾಗಿ ‘ಆರ್‌ಟಿ–ಪಿಸಿಆರ್‌’ ಪರೀಕ್ಷೆ ಜೊತೆಗೆ ‘ರ್‍ಯಾಪಿಡ್ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌’ಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು(ಐಸಿಎಂಆರ್‌) ಶಿಫಾರಸು ಮಾಡಿದೆ.

ಪ್ರಯೋಗಾಲಯದ ಪರೀಕ್ಷೆಗಳು ಇಲ್ಲದೇ ವ್ಯಕ್ತಿಯಲ್ಲಿ ಸೋಂಕು ಇದೆಯೇ ಇಲ್ಲವೇ ಎನ್ನುವುದನ್ನು ತಕ್ಷಣವೇ ನಿಖರವಾಗಿ ಪತ್ತೆಹಚ್ಚಲು ಈ ಕಿಟ್‌ಗಳು ನೆರವಾಗಲಿವೆ.

‘ದಕ್ಷಿಣ ಕೊರಿಯಾದ ಎಸ್‌ಡಿ ಬಯೋಸೆನ್ಸರ್‌ ಕಂಪನಿ ‘ಸ್ಟ್ಯಾಂಡರ್ಡ್‌ ಕ್ಯು ಕೋವಿಡ್‌–19 ಎಜಿ ಡಿಟೆಕ್ಷನ್‌ ಕಿಟ್’ ಅಭಿವೃದ್ಧಿಪಡಿಸಿದೆ.ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್ಮೂಲಕ ನಡೆಸಿದ ಪರೀಕ್ಷೆಯಲ್ಲಿ ವ್ಯಕ್ತಿಗೆ ಸೋಂಕು ಇಲ್ಲ ಎನ್ನುವುದು ದೃಢಪಟ್ಟರೆ, ಅಂಥವರನ್ನು ಮಾತ್ರ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ಸೋಂಕು ಇರುವುದು ದೃಢಪಟ್ಟರೆ ಮತ್ತೊಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿ ದೃಢಪಡಿಸಿಕೊಳ್ಳುವ ಅಗತ್ಯತೆ ಇಲ್ಲ’ ಎಂದು ಐಸಿಎಂಆರ್‌ ತಿಳಿಸಿದೆ.

‘ಕನಿಷ್ಠ 15 ರಿಂದ ಗರಿಷ್ಠ 30 ನಿಮಿಷದೊಳಗಾಗಿ ಸೋಂಕು ಇದೆಯೇ ಎಲ್ಲವೇ ಎನ್ನುವುದನ್ನು ಈ ಕಿಟ್‌ ಬಹಿರಂಗಪಡಿಸುತ್ತದೆ. ಪರೀಕ್ಷಾ ವರದಿಯನ್ನು ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಕಿಟ್‌ನಲ್ಲೇ ಬರಿಗಣ್ಣಿಗೆ ವರದಿ ಕಾಣಿಸುತ್ತದೆ’ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT