ಸೋಮವಾರ, ಫೆಬ್ರವರಿ 17, 2020
15 °C

ಭಾರತದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದರೆ ಪಾಕ್‌ಗೆ ಹೋಗಲಿ: ಸತೀಶ್ ಗೌತಮ್ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Satish Kumar Gautam

ಅಲಿಗಡ: ಭಾರತದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದಾದರೆ  ಸುಮಯ್ಯಾ ರಾಣಾ ಪಾಕಿಸ್ತಾನಕ್ಕೆ ಹೋಗಲಿ ಎಂದು ಅಲಿಘಡ ಸಂಸದ, ಬಿಜೆಪಿ ನಾಯಕ ಸತೀಶ್ ಕುಮಾರ್ ಗೌತಮ್ ಹೇಳಿದ್ದಾರೆ.

ಅಲಿಗಡದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕವಿ ಮುನಾವರ್ ರಾಣಾ ಅವರ ಪುತ್ರಿ ಸುಮಯ್ಯಾ ರಾಣಾ, ದೇಶದಲ್ಲಿ ಹಿಂಸಾತ್ಮಕ ವಾತಾವರಣ ಇದೆ. ಈ ರೀತಿಯ ವಾತಾವರಣ ಉಸಿರುಗಟ್ಟಿಸುತ್ತದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಗೌತಮ್, ಸುಮಯ್ಯಾ ಅವರಿಗೆ ಈ ದೇಶ ಉಸಿರುಗಟ್ಟಿಸುತ್ತಿದೆ ಎಂದಾದರೆ ಪಾಕಿಸ್ತಾನಕ್ಕೆ ಹೋಗಲು ಅವರಿಗೆ ಸಾಕಷ್ಟು ದಾರಿಗಳಿವೆ. ಭಾರತದಲ್ಲಿ ಎಲ್ಲರೂ ಮುಕ್ತವಾಗಿ  ಮಾತನಾಡಬಹುದು ಎಂದಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು